ಗಾಂಧೀಜಿ ಟ್ರಸ್ಟೀಶಿಪ್ ಪರಿಕಲ್ಪನೆ ಸದಾ ಪ್ರಸ್ತುತ: ಎಸ್. ಜನಾರ್ದನ್

ಮರವಂತೆ: ಜನರು ಸಂಪಾದಿಸುವ ಸಂಪತ್ತಿನಲ್ಲಿ ಅವರ ಶ್ರಮ ಮತ್ತು ವ್ಯವಹಾರದ ಪಾಲು ಮಾತ್ರ ಇರುವುದಲ್ಲ. ಅದರಲ್ಲಿ ಸಮಾಜದ ಕೊಡುಗೆಯೂ ಸೇರಿರುತ್ತದೆ. ಆದುದರಿಂದ ಜನರು ತಮ್ಮ ಸಂಪಾದನೆಯಲ್ಲಿ ತಮಗೆ ಅಗತ್ಯವಿರುವಷ್ಟನ್ನು ಉಳಿಸಿಕೊಂಡು ಉಳಿದುದನ್ನು ಸಮಾಜಕ್ಕೆ ಹಿಂತಿರುಗಿಸುವ ಮೂಲಕ ಸಂಪತ್ತಿನ ಟ್ರಸ್ಟಿಗಳಂತೆ ಕಾರ್ಯನಿರ್ವಹಿಸಬೇಕು ಎನ್ನುವ ಗಾಂಧೀಜಿ ಅವರ ಟ್ರಸ್ಟೀಶಿಪ್ ಪರಿಕಲ್ಪನೆಗೆ ಸಾರ್ವಕಾಲಿಕ ಪ್ರಸ್ತುತತೆ ಇದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಹೇಳಿದರು.  
       ನಾಗೂರಿನ ಕುಸುಮಾ ಸಮೂಹ ಸಂಸ್ಥೆಯ 15ನೆಯ ವಾರ್ಷಿಕಾಚರಣೆ ಮತ್ತು ಕುಸುಮಾ ಪ್ರತಿಷ್ಠಾನದ ಆರಂಭೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಮ್ಮ ಸಂಸ್ಥೆಯ ಗ್ರಾಹಕ ಸ್ನೇಹಿ ಯೋಜನೆಗಳ ಮೂಲಕ ಮತ್ತು ತಾವು ಈಗ ತಮ್ಮ ತಾಯಿಯ ಹೆಸರಿನಲ್ಲಿ ಆರಂಭಿಸಿದ ಪ್ರತಿಷ್ಠಾನದ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಳಿನ್‌ಕುಮಾರ ಶೆಟ್ಟಿ ಗಾಂಧೀಜಿಯವರ ಈ ಆಶಯವನ್ನು ತಮ್ಮದೇ ನೆಲೆಯಲ್ಲಿ 
ಅನುಷ್ಠಾನಿಸುತ್ತಿರುವುದು ಅನ್ಯರಿಗೆ ಮಾದರಿ ಎಂದು ಅವರು ನುಡಿದರು. 
       ನಿವೃತ್ತ ಶಿಕ್ಷಕಿ ಸುಧಾ ರಾಮ ಮೂರ್ತಿ ಕುಸುಮಾ ಪ್ರತಿಷ್ಠಾನವನ್ನು ಉದ್ಘಾಟಿಸಿ, ಜಗತ್ತು ನನಗೆ ಸೇರಿದ್ದು ಎಂದು ಭಾವಿಸುವವರ ನಡುವೆ ನಾನು ಜಗತ್ತಿಗೆ ಸೇರಿದವ ಎಂದು ಭಾವಿಸುವ ನಳಿನ್‌ಕುಮಾರ ಶೆಟ್ಟಿಯಂತವರ ಸಂಖ್ಯೆ ಹೆಚ್ಚಬೇಕು ಎಂದು ಆಶಿಸಿದರು. ಮುಖ್ಯ ಅತಿಥಿಯಾಗಿದ್ದ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಅರುಣ ನಾಯಕ್ ಕುಸುಮಾ ಸಂಸ್ಥೆಯ ಟ್ರಿಪಲ್ ಬೆನಿಫಿಟ್ ಸ್ಕೀಮ್‌ನ ಗಿಫ್ಟ್ ಕೂಪನ್ ಬಿಡುಗಡೆಗೊಳಿಸಿ, ಸಂಸ್ಥೆಗೆ ಶುಭ ಹಾರೈಸಿದರು. 'ಏಂಕರ್' ಸಂಸ್ಥೆಯ ಪ್ರಾದೇಶಿಕ ಪ್ರಬಂಧಕ ಶ್ರೀಪತಿ ಮಯ್ಯ ಮಾತನಾಡಿದರು. ಮಂಜು ಹಳಗೇರಿ ಅವರಿಗೆ ಸಂಸ್ಥೆಯ ವತಿಯಿಂದ ಸೋಲಾರ್ ದೀಪ ಕೊಡುಗೆ ನೀಡಲಾಯಿತು. 
      ಸಂಸ್ಥೆಯ ಮಾಲಕ ನಳಿನ್‌ಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯನಿರ್ವಾಹಕ ಕಾರ್ಯದರ್ಶಿ ಶಾಂತಿ ಯೋಜನೆಗಳ ಮಾಹಿತಿ ನೀಡಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಶಂಕರ ನಾರಾಯಣ ಭಟ್ ವಂದಿಸಿದರು.
     ಜನರು ಸಂಪಾದಿಸುವ ಸಂಪತ್ತಿನಲ್ಲಿ ಅವರ ಶ್ರಮ ಮತ್ತು ವ್ಯವಹಾರದ ಪಾಲು ಮಾತ್ರ ಇರುವುದಲ್ಲ. ಅದರಲ್ಲಿ ಸಮಾಜದ ಕೊಡುಗೆಯೂ ಸೇರಿರುತ್ತದೆ. ಆದುದರಿಂದ ಜನರು ತಮ್ಮ ಸಂಪಾದನೆಯಲ್ಲಿ ತಮಗೆ ಅಗತ್ಯವಿರುವಷ್ಟನ್ನು ಉಳಿಸಿಕೊಂಡು ಉಳಿದುದನ್ನು ಸಮಾಜಕ್ಕೆ ಹಿಂತಿರುಗಿಸುವ ಮೂಲಕ ಸಂಪತ್ತಿನ ಟ್ರಸ್ಟಿಗಳಂತೆ ಕಾರ್ಯನಿರ್ವಹಿಸಬೇಕು ಎನ್ನುವ ಗಾಂಧೀಜಿ ಅವರ ಟ್ರಸ್ಟೀಶಿಪ್ ಪರಿಕಲ್ಪನೆಗೆ ಸಾರ್ವಕಾಲಿಕ ಪ್ರಸ್ತುತತೆ ಇದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಹೇಳಿದರು.  

       ಗುರುವಾರ ನಡೆದ ನಾಗೂರಿನ ಕುಸುಮಾ ಸಮೂಹ ಸಂಸ್ಥೆಯ 15ನೆಯ ವಾರ್ಷಿಕಾಚರಣೆ ಮತ್ತು ಕುಸುಮಾ ಪ್ರತಿಷ್ಠಾನದ ಆರಂಭೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಮ್ಮ ಸಂಸ್ಥೆಯ ಗ್ರಾಹಕ ಸ್ನೇಹಿ ಯೋಜನೆಗಳ ಮೂಲಕ ಮತ್ತು ತಾವು ಈಗ ತಮ್ಮ ತಾಯಿಯ ಹೆಸರಿನಲ್ಲಿ ಆರಂಭಿಸಿದ ಪ್ರತಿಷ್ಠಾನದ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಳಿನ್‌ಕುಮಾರ ಶೆಟ್ಟಿ ಗಾಂಧೀಜಿಯವರ ಈ ಆಶಯವನ್ನು ತಮ್ಮದೇ ನೆಲೆಯಲ್ಲಿ 
ಅನುಷ್ಠಾನಿಸುತ್ತಿರುವುದು ಅನ್ಯರಿಗೆ ಮಾದರಿ ಎಂದು ಅವರು ನುಡಿದರು. 

       ನಿವೃತ್ತ ಶಿಕ್ಷಕಿ ಸುಧಾ ರಾಮ ಮೂರ್ತಿ ಕುಸುಮಾ ಪ್ರತಿಷ್ಠಾನವನ್ನು ಉದ್ಘಾಟಿಸಿ, ಜಗತ್ತು ನನಗೆ ಸೇರಿದ್ದು ಎಂದು ಭಾವಿಸುವವರ ನಡುವೆ ನಾನು ಜಗತ್ತಿಗೆ ಸೇರಿದವ ಎಂದು ಭಾವಿಸುವ ನಳಿನ್‌ಕುಮಾರ ಶೆಟ್ಟಿಯಂತವರ ಸಂಖ್ಯೆ ಹೆಚ್ಚಬೇಕು ಎಂದು ಆಶಿಸಿದರು. ಮುಖ್ಯ ಅತಿಥಿಯಾಗಿದ್ದ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಅರುಣ ನಾಯಕ್ ಕುಸುಮಾ ಸಂಸ್ಥೆಯ ಟ್ರಿಪಲ್ ಬೆನಿಫಿಟ್ ಸ್ಕೀಮ್‌ನ ಗಿಫ್ಟ್ ಕೂಪನ್ ಬಿಡುಗಡೆಗೊಳಿಸಿ, ಸಂಸ್ಥೆಗೆ ಶುಭ ಹಾರೈಸಿದರು. 'ಏಂಕರ್' ಸಂಸ್ಥೆಯ ಪ್ರಾದೇಶಿಕ ಪ್ರಬಂಧಕ ಶ್ರೀಪತಿ ಮಯ್ಯ ಮಾತನಾಡಿದರು. ಮಂಜು ಹಳಗೇರಿ ಅವರಿಗೆ ಸಂಸ್ಥೆಯ ವತಿಯಿಂದ ಸೋಲಾರ್ ದೀಪ ಕೊಡುಗೆ ನೀಡಲಾಯಿತು. 

        ಸಂಸ್ಥೆಯ ಮಾಲಕ ನಳಿನ್‌ಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯನಿರ್ವಾಹಕ ಕಾರ್ಯದರ್ಶಿ ಶಾಂತಿ ಯೋಜನೆಗಳ ಮಾಹಿತಿ ನೀಡಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಶಂಕರ ನಾರಾಯಣ ಭಟ್ ವಂದಿಸಿದರು.

ಇತರೆ ಸುದ್ದಿಗಳು:

ಈ ಸುದ್ದಿಯನ್ನು Share ಮಾಡಿ :

0 comments:

Post a Comment

© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com