ಅ.29- ರಾಷ್ಟ್ರೀಯ ಕ್ರೀಡಾದಿನಾಚರಣೆ

ಬ್ರಹ್ಮಾವರ: ನಗರದ ಎಸ್.ಎಂ.ಎಸ್ ಕಾಲೇಜು ಮತ್ತು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನು ಇದೇ 29ರಂದು ಕಾಲೇಜಿನ ಆಡಿಟೋರಿಯಂನಲ್ಲಿ ಆಚರಿಸಲಾಗುವುದು. ಶಾಸಕ ಪ್ರಮೋದ್ ಮಧ್ವರಾಜ್, ಡಿವೈಎಸ್‌ಪಿ ಡಾ.ಪ್ರಭುದೇವ ಮಾನೆ, ಡಾ.ಜಿ.ಎಚ್. ಪ್ರಭಾಕರ ಶೆಟ್ಟಿ, ಪ್ರಾಂಶುಪಾಲ ಪ್ರೊ.ಕೆ ನಾರಾಯಣನ್ ಉಪಸ್ಥಿತರಿರುವರು. ಸಮಾರಂಭದಲ್ಲಿ ರಾಷ್ಟ್ರಪಪತಿ ಪ್ರಶಸ್ತಿ ವಿಜೇತ ಬ್ರಹ್ಮಾವರ ಪೋಲಿಸ್ ಠಾಣೆಯ ಎ.ಎಸ್.ಐ ಶೀನ ಬಿಲ್ಲವ ಅವರನ್ನು ಸನ್ಮಾನಿಸಲಾಗುವುದು ಎಂದು ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಗ್ರೆಗರಿ ಡಿಸಿಲ್ವ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com