ಯುವಜನಾಂಗಕ್ಕೆ ಸಾಮಾಜಿಕ ಜವಾಬ್ದಾರಿ ಅಗತ್ಯ: ಶಶಿಕಾಂತ್‌ ಹತ್ವಾರ್‌

ಕುಂದಾಪುರ: ನಮ್ಮ ರಾಷ್ಟ್ರ ಮುಂದುವರಿಯಬೇಕಾದರೆ ಯುವಜನಾಂಗ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆಯಬೇಕು ಎಂದು ಭಂಡಾರ್ಕಾರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಧಿಕಾರಿ ಶಶಿಕಾಂತ್‌ ಹತ್ವಾರ್‌ ಅವರು ಹೇಳಿದರು.
      ಅವರು ಇಲ್ಲಿನ ಭಂಡಾರ್ಕಾರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡಿದರು.
  ವಿದ್ಯಾರ್ಥಿಗಳು ಸಮಾಜಮುಖೀ ಚಿಂತನೆ ನಡೆಸಿ ಸಾಮಾಜಿಕ ಬದುಕಿನೊಡನೆ ನೇರ ಸಂಪರ್ಕವನ್ನು ಇಟ್ಟುಕೊಳ್ಳಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು ಎಂದರು
     ಈ ಸಂದರ್ಭದಲ್ಲಿ ಯೋಜನಾಧಿಕಾರಿ ಕೆ.ಎಮ್‌.ವಿಜಯಕುಮಾರ್‌ ವಿದ್ಯಾರ್ಥಿ ನಾಯಕರಾದ ಸುಮಂಧರ, ಅರ್ಪಿತಾ, ಕೀರ್ತನಾಕುಮಾರಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com