ಬಾರ್ಕೂರು ಶ್ರೀ ಬ್ರಹ್ಮಲಿಂಗೇಶ್ವರ ವೀರಭದ್ರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮಾಗಣಿ ಸಭೆ

ಕುಂದಾಪುರ: ಪದ್ಮಶಾಲಿ ಸಮಾಜದವರು ಆರಾಧಿಸಿಕೊಂಡು ಬಂದಿರುವ ಮೂಲ ದೇವಸ್ಥಾನ ಬಾರ್ಕೂರು ಶ್ರೀ ಬ್ರಹ್ಮಲಿಂಗೇಶ್ವರ ವೀರಭದ್ರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಹಿತ ಚಿಂತನಾ  ಮಾಗಣಿ ಸಭೆ ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ್ ಶೆಟ್ಟಿಗಾರ್ ಅವರ ಹೊಸಮನೆ ವಠಾರದಲ್ಲಿ ನಡೆಯಿತು.
ದೇವಸ್ಥಾದ ಆಡಳಿತ ಮೊಕ್ತೇಸರರಾದ ಬಿ.ಶ್ರೀನಿವಾಸ ಶೆಟ್ಟಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅವರು ಮಾತನಾಡಿ, ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಪಡೆಯ ಬೇಕಾದರೆ ದೇವತಾ ಪೂಜಾ ಕೈಂಕರ್ಯಗಳಲ್ಲಿ  ಕುಟುಂಬ ಸಮೇತರಾಗಿ ಪಾಲ್ಗೊಂಡರೆ ದೇವಾಲಯಗಳಲ್ಲಿ ವಿಶೇಷ ಶಕ್ತಿ ವಿಜ್ರಂಭಿಸಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ. ದೇವಸ್ಥಾನದಲ್ಲಿ  ನಡೆಯಲಿರುವ ಸೋಣೆಯಾರತಿ, ನವರಾತ್ರಿ, ಸತ್ಯನಾರಾಯಣ ಪೂಜೆ ಹಾಗೂ ಇನ್ನಿತರ ದೇವತಾ ಕಾರ್ಯದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಹಾಗೂ ದೇವಸ್ಥಾನದಲ್ಲಿ ಪ್ರತೀ ಮಾಸಿಕ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಿದರು.  ದೇವಸ್ಥಾನದ ಕೂಡು ಕಟ್ಟಿಗೆ ಸೇರಿದ ಕ್ರೀಡಾಪಟುಗಳಿಗಾಗಿ ಮುಂದಿನ ನವೆಂಬರ್ ತಿಂಗಳಲ್ಲಿ ಕ್ರೀಡಾಕೂಟವನ್ನು ಏರ್ಪಡಿಸುವ ಬಗ್ಗೆ ರ್ಚಿಸಲಾಯಿತು. ಈ ಸಂದರ್ಭದಲ್ಲಿ ಪಿಎಚ್‍ಡಿ ಪದವಿ ಪಡೆದ ಮಿಲಾಗ್ರಿಸ್ ಕಾಲೇಜಿನ ಇತಿಹಾಸ ಉಪನ್ಯಾಸಕ ಚೇರ್ಕಾಡಿ ಜಯರಾಮ್ ಶೆಟ್ಟಿಗಾರ್ ಅವರ ಹುಟ್ಟೂರಾದ ವಕ್ವಾಡಿ ಹೊಸಮನೆ  ಕುಟುಂಬಸ್ಥರು ಹಾಗೂ ಸಮಾಜ ಬಾಂದವರು ಸನ್ಮಾನಿಸಿ ಗೌರವಿಸಿದರು.
ದೇವಸ್ಥಾನದ ಮಾಜಿ ಮೊಕ್ತೇಸರ ಎಚ್.ಎ.ಗೋಪಾಲ ಶೆಟ್ಟಿಗಾರ್, ನಾರಾಯಣ ಶೆಟ್ಟಿಗಾರ್, ಕೃಷ್ಣ ಶೆಟ್ಟಿಗಾರ, ಮಹಾಬಲ ಶೆಟ್ಟಿಗಾರ. ಗುಂಡು ಶೆಟ್ಟಿಗಾರ್, ಸಂಜೀವ ಶೆಟ್ಟಿಗಾರ, ಸುರೇಶ್ ಶೆಟ್ಟಿಗಾರ, ರಾಮ ಶೆಟ್ಟಿಗಾರ, ಅರುಣ್ ಶೆಟ್ಟಿಗಾರ, ಆನಂದ ಶೆಟ್ಟಿಗಾರ ಹಾಗೂ ಇನ್ನಿತರರು ಇದ್ದರು. ಶಿಕ್ಷಕ ಜನಾರ್ದನ ಶೆಟ್ಟಿಗಾರ ಕಾರ್ಯಕ್ರಮ ಸಂಯೋಜಿಸಿದ್ದರು.
ಪೊಟೋ: ಬಾರ್ಕೂರು1,2

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com