ತಾಲೂಕಿನಲ್ಲಿ ಮಳೆ ಇಳಿಮುಖ: ಪರಿಹಾರ ಕಾರ್ಯ ಚುರುಕು

ಕುಂದಾಪುರ: ತಾಲೂಕಿನಲ್ಲಿ ಮಳೆಯ ಬಿರುಸು ತಗ್ಗಿದೆ. ಗುರುವಾರ ರಾತ್ರಿ ಕೆಲವಡೆ ಮಳೆ - ಗಾಳಿಯಿಂದ ಹಾನಿ ಸಂಭವಿಸಿದೆ.
       ನಾಡ ಗ್ರಾಮದಲ್ಲಿ ಭಾರೀ ಗಾಳಿಯಿಂದಾಗಿ ಮನೆಗಳ ಮೇಲೆ ಮರಗಳು ಉರುಳಿವೆ. ಬೈಂದೂರು ವ್ಯಾಪ್ತಿಯ ಸಾರಂಕಿ ಹತ್ಯಾಡಿಯಲ್ಲಿ ಕೆ.ಪಿ. ಜಾರ್ಜ್‌ ಅವರ ಮನೆ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಸುಮಾರು 25,000 ರೂ. ನಷ್ಟ ಸಂಭವಿಸಿದೆ. ಸಿದ್ದಾಪುರ ಬಳಿಯ ರಾಗಿಬೈಲು ಗಾಡಿ ಜಡ್ಡು ಕಾವೇರಿ ಶೆಟ್ಟಿ ಅವರ ಮನೆಯ ಹೆಂಚುಗಳು ಹಾರಿಹೋಗಿವೆ.

ಪರಿಹಾರ ಕಾರ್ಯ

ಗುರುವಾರ ಮುಂಜಾನೆ ಬೀಸಿದ ಸುಂಟರಗಾಳಿಯಿಂದ ತತ್ತರಿಸಿದ ಪ್ರದೇಶಗಳಲ್ಲಿ ಸಮರೋಪಾದಿಯ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.


ವಿವಿಧ ಇಲಾಖೆಗಳ ಮುಖಸ್ಥರ ನೇತೃತ್ವದಲ್ಲಿ ಮನೆಗಳ ಮೇಲೆ, ರಸ್ತೆಯ ಮೇಲೆ ಬಿದ್ದ ಮರಗಳ - ವಿದ್ಯುತ್‌ ಕಂಬಗಳ ತೆರವು ಹಾಗೂ ದುರಸ್ತಿ ಕಾರ್ಯ ನಡೆಯುತ್ತಿದೆ.

ಈ ಪ್ರದೇಶದಲ್ಲಿ ಸುಮಾರು 85 ವಿದ್ಯುತ್‌ ಕಂಬಗಳು ಉರುಳಿದ್ದು, ಮೆಸ್ಕಾಂ ಇಲಾಖೆಯ ಸಿಬಂದಿ, ಅಧಿಕಾರಿಗಳು ತುಂಡಾಗಿ ಬಿದ್ದ ಕಂಬಗಳನ್ನು ಸಾಗಿಸುವ ಹಾಗೂ ಹೊಸದಾಗಿ ವಿದ್ಯುತ್‌ ಸಂಪರ್ಕ ನೀಡಲು ಬೇಕಾಗುವ ಕಾರ್ಯವನ್ನು ಶುಕ್ರವಾರ ನಡೆಸಿದರು.

ಮರಗಳ ಬಳಕೆ

ತುಂಬಾ ಹಾನಿಗೊಳಗಾದ ಮನೆಗಳ ತುರ್ತು ದುರಸ್ತಿ ಕಾರ್ಯ ನಡೆದಿದೆ. ಉರುಳಿ ಬಿದ್ದ ಮರಗಳನ್ನೇ ಮನೆ ದುರಸ್ತಿಗೆ ಬಳಸಲು ಅನುವು ಮಾಡಿಕೊಡಲಾಗಿದೆ. ಅಲ್ಲದೇ ಹೆಂಚುಗಳನ್ನು ನೀಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.


ಗಂಜಿಕೇಂದ್ರವನ್ನು ಶುಕ್ರವಾರ ರಾತ್ರಿ ತೆರವುಗೊಳಿಸಲಾಗುವುದು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ತಿಳಿಸಿದ್ದಾರೆ.

ಸ್ಥಳೀಯರೊಂದಿಗೆ ಕನ್ಯಾನದ ನಮ್ಮಭೂಮಿ ಸದಸ್ಯರು, ಅಭಿಮಾನಿ ನ್ಪೋರ್ಟ್ಸ್ ಮತ್ತು ಕಲ್ಚರಲ್‌ ಸಂಸ್ಥೆಯ ಸದಸ್ಯರು, ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಶಿವರಾಮ ಪೂಜಾರಿ ಮತ್ತು ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com