ಬಿರುಸಿನ ಕೂಂಬಿಂಗ್ ಕಾರ್ಯಾಚರಣೆ

ಸಿದ್ಧಾಪುರ: ಅಮಾಸೆಬೈಲು ಮತ್ತು ಶಂಕರನಾರಾಯಣ ಠಾಣೆ ವ್ಯಾಪ್ತಿಯ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಪೊಲೀಸರು ಮತ್ತು ಎಎನ್‌ಎಫ್ ಪಡೆ ಬಿರುಸಿನ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. 
   ನಕ್ಸಲ್ ಪೀಡಿತ ಪ್ರದೇಶಗಳಾದ ಜಡ್ಡಿನಗದ್ದೆ, ತೊಂಬಟ್ಟು, ಬಳ್ಮನೆ, ಕೆಳಾಸುಂಕ, ಹೊಸಂಗಡಿ, ಹಳ್ಳಿಹೊಳೆ, ದೇವರಬಾಳು, ಚಕ್ರ ಮೈದಾನ, ಕಮಲಶಿಲೆ, ಯಡಮೊಗೆ ಹಾಗೂ ಮಡಾಮಕ್ಕಿ ಗ್ರಾಮದ ಹಂಜ, ಯಡಮಲೆ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ. ಬೈಂದೂರು ವಿರಾಜಪೇಟೆ ರಾಜ್ಯ ಹೆದ್ದಾರಿ ಮಾಂಡಿಮೂರುಕೈಯಲ್ಲಿ ಅಮಾಸೆಬೈಲು ಠಾಣಾಧಿಕಾರಿ ನಾಸೀರ್ ಹುಸೇನ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ಹಾಗೂ ಪ್ರಯಾಣಿಕರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com