ಅ.6: ಏಕ ವ್ಯಕ್ತಿ ಯಕ್ಷಗಾನ ಸ್ಪರ್ಧೆ

ತೆಕ್ಕಟ್ಟೆ: ಕಳೆದ ಹಲವು ವರ್ಷಗಳಿಂದ ಯಕ್ಷಗಾನದ ವಿವಿಧ ಪ್ರಕಾರಗಳ ಸ್ಪರ್ಧೆಯನ್ನು ಹಮ್ಮಿಕೊಂಡು ಬಂದ ತೆಕ್ಕಟ್ಟೆ-ಕೊಮೆ ಯಶಸ್ವಿ ಕಲಾವೃಂದ ಅ.6ರಂದು ತೆಕ್ಕಟ್ಟೆಯ ಹಯಗ್ರೀವ ಸಬಾಭವನದಲ್ಲಿ ಬಡಗುತಿಟ್ಟಿನ ಶೈಲಿಯಲ್ಲಿ 'ಏಕ ವ್ಯಕ್ತಿ ಯಕ್ಷಗಾನ ಸ್ಪರ್ಧೆ'ಯನ್ನು ಹಮ್ಮಿಕೊಂಡಿದೆ.
     15 ನಿಮಿಷಗಳ ಕಾಲಮಿತಿಯಲ್ಲಿ ಅಂಗಿಕ ಮತ್ತು ವಾಚಿಕಾಭಿನಯ ಸಹಿತ ಸ್ಪರ್ದಾಳುಗಳು ಪ್ರರ್ದಶನ ನೀಡುವುದಕ್ಕೆ ಅವಕಾಶವಿದೆ. ಹವ್ಯಾಸಿ ಕಲಾವಿದರಿಗೆ ಮಾತ್ರ ಸೀಮಿತವಾದ ಈ ಸ್ಪರ್ಧೆಯಲ್ಲಿ 16ವರ್ಷದ ಕೆಳಗಿನ ಜೂನಿಯರ್‌ ವಿಭಾಗ ಮತ್ತು 16ವರ್ಷಕ್ಕಿಂತ ಮೇಲ್ಪಟ್ಟ ಸೀನಿಯರ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
      ಹಿಮ್ಮೇಳ -ವೇಷಭೂಷಣಗಳನ್ನು ಸಂಘಟಕರು ಒದಗಿಸಲಿದ್ದು, ಪ್ರಥಮ 2 ಸಾವಿರ, ದ್ವಿತಿಯ 1 ಸಾವಿರ, ಹಾಗೂ ತೃತೀಯ 500 ರೂ. ಬಹುಮಾನವಿರುತ್ತದೆ. ಅ.1 ಹೆಸರು ನೋಂದಾಯಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂ.9945947771ನ್ನು ಸಂಪರ್ಕಿಸಲು ಕೋರಲಾಗಿದೆ.

* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com