ಬೀಜಾಡಿ: ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆ

ಕುಂದಾಪುರ: ಕೋಟೇಶ್ವರ ರೋಟರಿ ಕ್ಲಬ್ ಮತ್ತು ಬೀಜಾಡಿ ಸೀತಾಲಕ್ಷ್ಮೀ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ಹಾಗೂ ಬೀಜಾಡಿ-ಕೋಟೇಶ್ವರ ಪಂಚಾಯಿತಿ ಮತ್ತು ಎಫ್‍ಎಸ್‍ಎಲ್ ಇಂಡಿಯಾ ಇವರ ಜಂಟಿ ಆಶ್ರಯದಲ್ಲಿ ಬೀಜಾಡಿ-ಗೋಪಾಡಿ ಕಡಲ ತೀರದ ಪರಿಸರವನ್ನು ಕಸಗಳನ್ನು ತೆಗೆಯುವದರ ಮೂಲಕ ಸ್ವಚ್ಛತಾ ಆಭಿಯಾನ ನಡೆಸಲಾಯಿತು.
 ಇದೇ ಸಂದರ್ಭದಲ್ಲಿ ಕೋಟೇಶ್ವರ ರೋಟರಿ ಅಧ್ಯಕ್ಷ ಪ್ರಭಾಕರ ಕುಂಭಾಶಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಬೀಜಾಡಿ ಪಂಚಾಯಿತಿ ಉಪಾಧ್ಯಕ್ಷ ಸುರೇಶ ಶೆಟ್ಟಿ, ಕೋಟೇಶ್ವರ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಶೆಟ್ಟಿ, ರೋಟರಿ ನಿರ್ದೇಶಕ ನಾಗೇಶ ಶೆಟ್ಟಿಗಾರ್, ಸ್ಥಳೀಯ ಮುಖಂಡ ಆಶೋಕ ಪೂಜಾರಿ, ಉದಯ ಕುಮಾರ್ ಶೆಟ್ಟಿ ಮಾರ್ಕೋಡು, ಸತೀಶ್ ನಾಯಕ್ ಮೊದಲಾದವರೂ ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಬೀಜಾಡಿ,ಗೋಪಾಡಿ,ಕೊರವಡಿ,ಕನ್ನುಕೆರೆ,ಕೊಮೆ,ತೆಕ್ಕಟ್ಟೆ ಪರಿಸರದ ಕಡಲ ತೀರಗಳನ್ನು ಸ್ವಚ್ಛಗೊಳಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com