ಮೂರೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬಿಲ್ವ ಆಂದೋಲನ

ಕುಂದಾಪುರ: ಪರಿಸರದಲ್ಲಿ ಗಿಡ ಮರಗಳ ಸಂಖ್ಯೆ ಸಮೃದ್ಧವಾದಷ್ಟು ಹೆಚ್ಚು ನೆಮ್ಮದಿಯಿಂದ ಮನುಷ್ಯ ಬದುಕಲು ಸಾಧ್ಯ ಆದುದರಿಂದ ಪ್ರತಿಯೊಬ್ಬರು ತಮಗೆ ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಾ ಬಂದರೇ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಕೋಣಿಯ ಮೂರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋಣಿ ನರಸಿಂಹ ಕಾರಂತ್ ಹೇಳಿದರು.
      ಅವರು ಇತ್ತೀಚೆಗೆ ಕೋಣಿಯ ಮೂರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಗ್ರೀನ್ ಇಂಡಿಯಾ ಮೂವ್‍ಮೆಂಟ್ (ರಿ)ನ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ಬಿಲ್ವವೃಕ್ಷ ಸಸಿಗಳನ್ನು ನೆಟ್ಟು ಮಾತನಾಡಿದರು.
ದೇವಳದ ಪ್ರಧಾನ ಅರ್ಚಕ ಭಾಸ್ಕರ್ ಐತಾಳ್, ದೇವಳ ಸಮಿತಿ ಸದಸ್ಯ ಬಾಬು, ಬಿಲ್ವ ವೃಕ್ಷ ಆಂದೋಲನ ಸಂಚಾಲಕ ಸಂತೋಷ ಕೋಣಿ, ಅಧ್ಯಾಪಕ ಅಶೋಕಕುಮಾರ್ ಹೊಳ್ಳ, ಕೋಣಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
ಶಶಿಕಾಂತ್ ಸ್ವಾಗತಿಸಿ, ಪ್ರವೀಣ ಭಂಡಾರಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com