ಸಂಘರ್ಷಕ್ಕಿಂತ ಚರ್ಚೆಯಿಂದ ಪರಿಹಾರ: ಸಂಸದ ಹೆಗ್ಡೆ

ಕುಂದಾಪುರ: ಬ್ರಹ್ಮಾವರದಲ್ಲಿ ಚತುಷ್ಪಥ ಕಾಮಗಾರಿಯಡಿ ಫ್ಲೈಓವರ್ ನಿರ್ಮಾಣ ಆಗ್ರಹಿಸಿ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆದ್ದಾರಿ ಇಲಾಖೆ ಖಾಸಗಿ ಸರ್ವೆಗೆ ಅನುವು ಮಾಡಿಕೊಟ್ಟಿದ್ದರೂ ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿರುವುದು ಸರಿಯಲ್ಲ. ಇದರಿಂದ ಏನನ್ನೂ ಸಾಸಲು ಸಾಧ್ಯವಿಲ್ಲ. ಚರ್ಚೆಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
        ಕುಂದಾಪುರದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣ ವಠಾರದಲ್ಲಿ ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 
      ಬ್ರಹ್ಮಾವರದಲ್ಲಿ ಈಗಾಗಲೆ ಚತುಷ್ಪಥ ಕಾಮಗಾರಿಯಡಿ ಅರ್ಧದಷ್ಟು ಕೆಲಸ ನಡೆದಿದೆ. ಬೇಡಿಕೆ ತಡವಾಗಿ ಕೇಳಿ ಬರುತ್ತಿದೆ. ಆದರೂ ಅಲ್ಲಿ ಏನಾಗಬೇಕು ಅನ್ನುವುದು ಚರ್ಚಿಸಬೇಕಾದುದು ಅಗತ್ಯ. ಫ್ಲೈ ಓವರ್ ಆಗುವಂತಿದ್ದರೆ ಅದು ಎಷ್ಟು ದೂರದವರೆಗೆ ಅನ್ನುವುದು ಮುಖ್ಯ. ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಬೇಡಿಕೆ ಈಡೇರಿಕೆಗೆ ಬದ್ಧರಾಗಿದ್ದಾರೆ. ಈಗಾಗಲೆ ಈ ವಿಷಯದ ಕುರಿತು ಅವರೊಂದಿಗೆ ಚರ್ಚಿಸಿದ್ದೇನೆ. ಪ್ರತಿಭಟನಾಕಾರರು ಸಂಘರ್ಷಕ್ಕಿಂತ ಚರ್ಚೆಗೆ ಬರುವುದು ಒಳಿತು ಎಂದು ಅವರು ಸಲಹೆ ನೀಡಿದರು. 
       ಡಿಸೆಂಬರ್‌ನಲ್ಲಿ ಮಡಗಾಂವ್-ಮಂಗಳೂರು ಇಂಟರ್‌ಸಿಟಿ ರೈಲು ಓಡಾಟ: ಡಿಸೆಂಬರ್‌ನಲ್ಲಿ ಮಡಗಾಂವ್-ಮಂಗಳೂರು ಇಂಟರ್‌ಸಿಟಿ ರೈಲು ಓಡಾಟ ಆರಂಭಿಸಲಿದೆ. ಮಂಗಳೂರನ್ನು ಪ್ರತ್ಯೇಕ ವಿಭಾಗವನ್ನಾಗಿ ಮಾಡಬೇಕೆಂಬ ಬೇಡಿಕೆಗೂ ಸ್ಪಂದನ ದೊರೆಯುತ್ತಿದೆ. ಭಟ್ಕಳ-ತೋಕೂರು ಡೀಸೆಲ್ ಎಂಜಿನ್ ರೈಲು ಓಡಾಟ ನಡೆಸುವ ಪ್ರಕ್ರಿಯೆ ಅಂತಿಮಗೊಂಡಿದೆ. ಮಂಗಳೂರು ವಿಭಾಗ ಆದಲ್ಲಿ ಪಾಲ್‌ಘಾಟ್-ಹುಬ್ಬಳ್ಳಿ ವಲಯದಿಂದ ಬೇರ್ಪಟ್ಟು ಹೆಚ್ಚಿನ ಆದಾಯ ರೈಲ್ವೆಗೆ ಬರಲಿದೆ. ಮಂಗಳೂರಿನಲ್ಲಿ ರೈಲ್ವೆ ತರಬೇತಿ ಸೆಂಟರ್ ಮಂಜೂರಾಗಿದೆ ಎಂದ ಅವರು, ರೈಲ್ವೆ ನಿಲ್ದಾಣಕ್ಕೆ ಬರುವ ಮಾರ್ಗದ ಅಭಿವೃದ್ಧಿಗೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ ಅವರು ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು. 
    ರೈಲ್ವೆ ಸಲಹಾ ಮಂಡಳಿಯ ಸದಸ್ಯರಾದ ಕೆ.ರಾಧಾಕೃಷ್ಣ ಶೆಣೈ, ಸಚ್ಚಿದಾನಂದ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಶೀನ ಪೂಜಾರಿ, ಕುಂದಾಪುರ ಪುರಸಭೆ ಸದಸ್ಯ ರಾಜೇಶ್ ಕಾವೇರಿ, ಬಿಜೆಪಿ ಮುಖಂಡ ಕಿಶೋರ್‌ಕುಮಾರ್ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com