ಸೆ.20: ಸಿಐಟಿಯುನಿಂದ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ

ಉಡುಪಿ: ಕಾರ್ಮಿಕರ ಬೇಡಿಕೆಗಳಿಗೆ ಸರಕಾರದ ಗಮನ ಸೆಳೆಯಲು ಸಿಐಟಿಯು ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ  ರಾಜ್ಯದಾದ್ಯಂತ ಜರಗುವ ಪ್ರತಿಭಟನೆಯ ಭಾಗವಾಗಿ ಸೆಪ್ಟೆಂಬರ್ 20ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಪ್ರತಿಭಟನೆ ನಡೆಯಲಿದೆ. 
       ಬೆಲೆ ಏರಿಕೆಯನ್ನು ತಡೆಗಟ್ಟವುದು, ಅಕುಶಲ ಹಾಗೂ ಅಸಂಘಟಿತ ಕಾರ್ಮಿಕರಿಗೆ ಮಾಸಿಕ ಕನಿಷ್ಟ ವೇತನ ರೂ. 10,000/- ನಿಗದಿಪಡಿಸುವುದು, ಆಟೋ ಚಾಲಕರು, ಎಲ್ಲಾ ಬಗೆಯ ವಾಹನ ಚಾಲಕರು ಮತ್ತು ಇತರರಿಗೆ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಲು ಕನಿಷ್ಟ ರೂ. 1,000 ಕೋಟಿ ಹಂಚಿಕೆ ಮಾಡುವುದು, ಬೀಡಿ ಕಾರ್ಮಿಕರಿಗೆ 1,000 ಬೀಡಿಗೆ ಕನಿಷ್ಟ ರೂ. 200 ಮತ್ತು ಪ್ರತಿ ಅಂಶಕ್ಕೆ 5.00 ಪೈಸೆ ತುಟ್ಟಿ ಭತ್ಯೆ ನಿಗದಿಪಡಿಸುವುದು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪ್ರತ್ಯೇಕ ಆಡಳಿತ ಅಧಿಕಾರಿಯನ್ನು ನೇಮಿಸವುದು. ಅಂಗನಾವಾಡಿ, ಅಕ್ಷರ ದಾಸೋಹ, ಆಶಾ ಮೊದಲಾದ ಸ್ಕೀಮ್ ನೌಕರರನ್ನು ಖಾಯಂ ಗೊಳಿಸವುದು, ಹೊರ ಗುತ್ತಿಗೆ, ಕಾರ್ಮಿಕ ಪದ್ದತಿ ನಿಷೇದಿಸಿ, ದಿನಗೂಲಿ ನೌಕರನ್ನು ಖಾಯಂಗೊಳಿಸಿ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಉಡುಪಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ಸಿಐಟಿಯುನ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com