ಮುಂಬೈ ಸಿಎಸ್‌ಟಿ ರೈಲು ಕುಂದಾಪುರದಲ್ಲಿ ನಿಲುಗಡೆ: ಭವ್ಯ ಸ್ವಾಗತ

ಕುಂದಾಪುರ: ಇಲ್ಲಿನ ಪ್ರಮುಖ ಬೇಡಿಕೆಯಾಗಿರುವ ಮುಂಬೈ-ಮಂಗಳೂರು ಸಿಎಸ್‌ಟಿ ಎಕ್ಸ್‌ಪ್ರೆಸ್ ರೈಲು ಬುಧವಾರ ಸಂಜೆ 6.25ಕ್ಕೆ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದು. ಸಾರ್ವಜನಿಕರು ಸೇರಿದಂತೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು ಸಂಭ್ರಮಾಚರಣೆ ನಡೆಸಿದರು. ವಾದ್ಯಮೇಳಗಳೊಂದಿಗೆ ರೈಲನ್ನು ಬರಮಾಡಿಕೊಂಡು ನಾಗರಿಕರು ಭಾರಿ ಗಾತ್ರದ ಹೂಮಾಲೆ ಹಾಕಿ ಸ್ವಾಗತಿಸಿದರು. ಸಿಹಿ ಹಂಚಿ ಹರ್ಷ ಹಂಚಿಕೊಂಡರು. 
ಈ ಸಂದರ್ಭದಲ್ಲಿ  ಸಂಸದ ಕೆ. ಜಯಪ್ರಕಾಶ್‌ ಮಾತನಾಡಿ, ಕುಂದಾಪುರ ರೈಲು ನಿಲುಗಡೆಯ ಬಹುತೇಕ ಬೇಡಿಕೆಗಳು ಈಡೇರಿದೆ. ಇನ್ನು ಉಳಿದ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಲಾಗುವುದು. ಮುಂದಿನ ಡಿಸಂಬರ್‌ ವೇಳೆಗೆ ಇಂಟರ್‌ ಸಿಟಿ ರೈಲು ಕುಂದಾಪುರದಲ್ಲಿ ನಿಲುಗಡೆ ಕಾಣಲಿದೆ ಮತ್ತು ಇದಕ್ಕಾಗಿ ಪ್ರಯತ್ನಗಳು ಸಾಗಿವೆ. ಕರಾವಳಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ರೈಲ್ವೇ ಇಲಾಖೆಗಳ ಸಮಸ್ಯೆ ಹಾಗೂ ನೂತನ ಯೋಜನೆಗಳ ಅನುಷ್ಠಾನಗಳ ಕುರಿತು ಚರ್ಚೆ ನಡೆಸಿದ್ದೇನೆ. ಈ ಬಾರಿ ರೈಲ್ವೇ ಬಜೆಟ್‌ನಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ದೊರಕಿರುವ ಪ್ರಾಶಸ್ತ್ಯಗಳೇ ಇದಕ್ಕೆ ಸಾಕ್ಷಿ ಎಂದರು.
ರೈಲ್ವೆ ಸಲಹಾ ಮಂಡಳಿಯ ಸದಸ್ಯರಾದ ಕೆ.ರಾಧಾಕೃಷ್ಣ ಶೆಣೈ, ಸಚ್ಚಿದಾನಂದ ಶೆಟ್ಟಿ, ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಉಪಾಧ್ಯಕ್ಷ ವಿವೇಕ್ ನಾಯಕ್, ಎಚ್.ಎಸ್.ಹತ್ವಾರ್, ಗಣೇಶ್ ಪುತ್ರನ್, ಗಣೇಶ್ ಶೇರುಗಾರ್, ಗಣೇಶ ಭಟ್, ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಸಿ ಹಾಗೂ ಸರ್ವ ಪದಾಕಾರಿಗಳು, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ, ಮುಖಂಡ ಕಿಶೋರ್‌ಕುಮಾರ್, ರೈಲ್ವೆ ಹಿತರಕ್ಷಣಾ ಸಮಿತಿಯ ಸರ್ವ ಪದಾಧಿಕಾರಿಗಳು, ನಾಗರಿಕರು ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com