ಸೆ.25: ಮಂಗಳೂರು-ಮುಂಬಯಿ ಸಿಎಸ್‌ಟಿ ಎಕ್ಸ್‌ಪ್ರೆಸ್ ರೆಲು ನಿಲುಗಡೆ

ಕುಂದಾಪುರ: ಸೆ.25ರಂದು ಮಂಗಳೂರು-ಮುಂಬಯಿ ಸಿಎಸ್‌ಟಿ ಎಕ್ಸ್‌ಪ್ರೆಸ್ ರೆಲು ನಿಲುಗಡೆಗೆಯಾಗಲಿದ್ದು ಕುಂದಾಪುರ ರೆಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸ್ವಾಗತಕ್ಕೆ ಸಿದ್ಧತೆ ನಡೆಸಿದೆ. 
   ಈಗಾಗಲೇ ಕಾರವಾರ-ಯಶವಂತಪುರ ರೆಲು ಸೇರಿದಂತೆ ಪ್ರಮುಖ ರೆಲುಗಳು ಕುಂದಾಪುರ ರೆಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದು ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿಗೆ 2 ವರ್ಷ ತುಂಬುತ್ತಿರುವ ಸಂದರ್ಭ ಪ್ರಮುಖ ಬೇಡಿಕೆ ಈಡೇರುತ್ತಿದೆ. ಸಮಿತಿಯ ಹೋರಾಟದ ಫಲವಾಗಿ ರೆಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದ ಇಕ್ಕೆಲಗಳಲ್ಲಿ ದಾರಿದೀಪ ವ್ಯವಸ್ಥೆ ಆಗಿದೆ.
     ಸಂಸದರ ಕೋಟಾದಡಿ ರೆಲ್ವೆ ಮುಂಗಡ ಟಿಕೇಟ್ ಕೇಂದ್ರ ಅಂಚೆ ಕಚೇರಿಯಲ್ಲಿ ಕಾರ್ಯಾಚರಿಸುತ್ತಿದೆ. ಸಮಿತಿ ಹೋರಾಟಕ್ಕಿಳಿಯುವ ಮೊದಲು ನಿಲ್ದಾಣದ ಮಾಸಿಕ ಆದಾಯ 2ಲಕ್ಷಕ್ಕೆ ಸೀಮಿತವಾಗಿದ್ದು, ಪ್ರಸ್ತುತ 10 ಲಕ್ಷ ರೂ. ಮೀರಿದೆ. ಬೇಸಿಗೆಯಲ್ಲಿ ಮಾಸಿಕ 15ಲಕ್ಷ ಆದಾಯ ಬಂದಿದ್ದು ದಾಖಲೆಯಾಗಿದೆ. ಸಮಿತಿಯ ಬೇಡಿಕೆಗೆ ಪ್ರಯಾಣಿಕರ ಹಾಗೂ ಸಂಸದ ಜಯಪ್ರಕಾಶ್ ಹೆಗ್ಡೆಯವರ ಬೆಂಬಲ ಕಾರಣ. ಈ ನೆಲೆಯಲ್ಲಿ ಮಂಗಳೂರು-ಮುಂಬಯಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಸಂಸದರು, ರೈಲ್ವೆ ನಿಗಮದ ಪ್ರಮುಖರು, ರೈಲ್ವೆ ಸಲಹಾ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಚಾಲಕ ಕೆಂಚನೂರು ಸೋಮಶೇಖರ ಶೆಟ್ಟಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com