ಮಕ್ಕಳಿಗೆ ಸರಕಾರೀ ಹಾಲು ಬೇಡವಂತೆ!

ಹೆಮ್ಮಾಡಿ: ಶಾಲಾ ಮಕ್ಕಳ ಆರೋಗ್ಯಕ್ಕೆ ಪೂರಕವಾದ ಪೌಷ್ಠಿಕ ಸತ್ವಗಳು ಶಾಲೆಯಲ್ಲಿ ಸಿಗಬೇಕು ಎಂಬ ಸದುದ್ದೇಶದಿಂದ ಸರಕಾರ ಆರಂಭಿಸಿದ ಕ್ಷೀರಭಾಗ್ಯ ಯೋಜನೆಯನ್ವಯ ವಿತರಿಸಲಾಗುತ್ತಿರುವ ಹಾಲನ್ನು ಕೆಲವು ಶಾಲೆಗಳಲ್ಲಿ ಮಕ್ಕಳು ಕುಡಿಯಲು ನಿರಾಕರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಆಲೂರು ಸರಕಾರಿ ಪ್ರೌಢಶಾಲೆಯ ಹತ್ತಕ್ಕೂ ಹೆಚ್ಚು ಮಕ್ಕಳು ಹಾಲು ಕುಡಿಯಲು ಒಪ್ಪದ ಸಂಗತಿ ಬಹಿರಂಗಗೊಂಡಿದ್ದು, ಮಕ್ಕಳ ಈ ವರ್ತನೆ ಅಚ್ಚರಿ ಹುಟ್ಟಿಸಿದೆ. ಕ್ಷೀರಭಾಗ್ಯ ಹಾಲು ಕುಡಿದ ಸ್ಥಳೀಯ ವಿದ್ಯಾರ್ಥಿನಿಯೊಬ್ಬಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆಕೆ ಹಾಲು ಕುಡಿಯುವುದನ್ನು ನಿಲ್ಲಿಸಿದ್ದಾಳೆ. ಇದಾದ ನಂತರ ಕೆಲವು ವಿದ್ಯಾರ್ಥಿಗಳು ಹಾಲು ಕುಡಿಯುವುದನ್ನು ನಿರಾಕರಿಸಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಅಂತಹ ಸಮಸ್ಯೆಗಳೇನೂ ಎದುರಾಗದಿದ್ದರೂ ಮಾನಸಿಕವಾಗಿ ಈ ಮಕ್ಕಳು ಹಾಲು ಕುಡಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮತ್ತಷ್ಟು ವಿದ್ಯಾರ್ಥಿಗಳು ಹಾಲು ಕುಡಿಯಲು ಹಿಂಜರಿಯುವ ಸಾಧ್ಯತೆಯಿದೆ. ಹಾಲು ಕುಡಿಯಲೇಬೇಕು ಎಂಬ ಒತ್ತಾಯಕ್ಕೆ ಕಟ್ಟುಬೀಳದ ಇಲ್ಲಿನ ಶಿಕ್ಷಕರು ಈ ಮಕ್ಕಳ ಮನಸೆಳೆಯುವ ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿಲ್ಲ. ಆದ್ದರಿಂದ ಅನ್ಯಮಾರ್ಗ ಕಾಣದ ಇಲ್ಲಿನ ಶಿಕ್ಷಕರು ಹಾಲು ಕುಡಿಯಲೊಪ್ಪದ ಮಕ್ಕಳನ್ನು ಮಾನಸಿಕ ಹಾಗೂ ದೆ„ಹಿಕವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಹಾಲು ಬಿಸಿ ಮಾಡುವ ಮತ್ತು ವಿತರಿಸುವ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ಅಥವಾ ಆಕ್ಷೇಪಾರ್ಹ ಸಂಗತಿಗಳು ಕಂಡುಬಾರದಿದ್ದರೂ ಶಾಲಾ ಮಕ್ಕಳು ಮಾತ್ರ ಯಾಕೆ ಹೀಗಾಡುತ್ತಾರೆ ಎಂಬುದು ಕುತೂಹಲಕಾರಿ ಅಂಶವಾಗಿದೆ. ಆಲೂರು ಮಾತ್ರವಲ್ಲದೇ ಬೆ„ಂದೂರು ವ್ಯಾಪ್ತಿಯ ಹಲವು ಶಾಲೆಗಳಲ್ಲಿ ಇಂತಹ ಘಟನೆಗಳು ವರದಿಯಾಗಿದ್ದು, ಕೆಲವೆಡೆ ಇಂತಹ ಮಕ್ಕಳಿಗೆ ಹಾಲು ಕುಡಿಯಲು ಇಷ್ಟವಿಲ್ಲದಿದ್ದರೂ ಹಾಲು ಕುಡಿಯಲೇಬೇಕು ಎಂಬ ಒತ್ತಾಯವನ್ನು ಹೇರುತ್ತಿರುವ ಸಂಗತಿಯೂ ಗಮನಕ್ಕೆ ಬಂದಿದ್ದು, ಕ್ಷೀರಭಾಗ್ಯ ಯೋಜನೆಯ ಸಮರ್ಥ ಅನುಷ್ಠಾನದ ನಿಟ್ಟಿನಲ್ಲಿ ಸಂಬಂಧಪಟ್ಟ ಅದಿಕಾರಿಗಳು ಗಮನಹರಿಸಿ ಮಕ್ಕಳ ವರ್ತನೆಯ ಕಾರಣಗಳನ್ನು ಪತ್ತೆ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗುವುದು ಒಳಿತು ಎಂಬುದು ಸಾರ್ವಜನಿಕರ ಅಭಿಪ್ರಾಯ.
* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura

Udayavani | Sep 22, 2013

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com