ದಿಲ್ಲಿ ಹತ್ಯಾಚಾರಿಗಳಿಗೆ ಇಂದು ಶಿಕ್ಷೆ ಪ್ರಕಟ

ಸುದ್ದಿ: ಡಿ.16ರಂದು ದೆಹಲಿಯಲ್ಲಿ 23 ವರ್ಷದ ಅರೆವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸಾವಿಗೆ ಕಾರಣರಾದ ದುಷ್ಟರಿಗೆ ಶಿಕ್ಷೆ ಶುಕ್ರವಾರ ನಿರ್ಧಾರವಾಗಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಈ ಘಟನೆಯ ತೀರ್ಪು ಈಗಾಗಲೇ ಪ್ರಕಟವಾಗಿದೆ. ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಾಲ್ವರು ಅಪರಾಧಿಗಳ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, ಇಡೀ ದೇಶಕ್ಕೆ ದೇಶವೇ ಇದಕ್ಕಾಗಿ ಕಾದು ಕುಳಿತಿದೆ. ನಿರ್ಭಯಾಳ ಮೇಲೆ ಅತ್ಯಂತ ಕ್ರೂರವಾಗಿ ಅತ್ಯಾಚಾರವೆಸಗಿ ಅಟ್ಟಹಾಸಗೈದಿದ್ದ ಪಾತಕಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂಬ ಕೂಗು ದೇಶಾದ್ಯಂತ ಕೇಳಿಬರುತ್ತಿದೆ. ಈ ಬಗ್ಗೆ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ ದೆಹಲಿ ತ್ವರಿತ ನ್ಯಾಯಾಲಯವು ಎಲ್ಲ ನಾಲ್ವರು ಆರೋಪಿ
ಗಳ ಅಪರಾಧವನ್ನು ಧೃಡೀಕರಿಸಿತ್ತು. ಅಪರಾಧಿಗಳಾದ ಮುಖೇಶ್ ಸಿಂಗ್, ಅಕ್ಷಯ್ ಸಿಂಗ್, ವಿನಯ್ ಶರ್ಮ ಮತ್ತು ಪವನ್ ಗುಪ್ತ ವಿರುದ್ಧ ಅತ್ಯಾಚಾರ, ಕೊಲೆ, ಅಪಹರಣ, ಕೊಲೆ ಯತ್ನ, ಸಾಕ್ಷ್ಯನಾಶ ಸೇರಿದಂತೆ 14 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಎಲ್ಲಾ ಪ್ರಕರಣಗಳಲ್ಲೂ ನಾಲ್ವರ ಆರೋಪಗಳು ಸಾಬೀತಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com