ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು: ವಾಸುದೇವ

ಹಂಗಾರಕಟ್ಟೆ: ಭಗವಂತ ಮೊದಲು ಪ್ರಜೆಗಳನ್ನು ಸೃಷ್ಟಿಸಿ, ನಂತರ ಆಯಾಯ ಜನರ ಗುಣ ಕರ್ಮಗಳಿಗೆ ಅನು­ಗುಣವಾಗಿ ವರ್ಣ ವಿಭಜನೆ ಮಾಡ­ಲಾಯಿತು. ವರ್ಣಗಳ ಆಧಾರ­ದಲ್ಲಿ ಜಾತಿ ರಚನೆಯಾಗಿದೆ. ಆದರೆ ಎಲ್ಲಿ­ಯೂ ಕೂಡ ಯಾವ ಜಾತಿ ಮೇಲೆ ಕೀಳು ಎನ್ನುವುದನ್ನು ತಿಳಿಸಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಪಂಚಾಂಗಕರ್ತ ಹಾಲಾಡಿಯ ವಿದ್ವಾನ್ ವಾಸುದೇವ ಜೋಯಿಸ್ ಹೇಳಿದರು.
      ಹಂಗಾರಕಟ್ಟೆ ಶ್ರೀರಾಮ ಮಂದಿರ­ದಲ್ಲಿ ಅವರು ಐರೋಡಿ ಬಾಳ್ಕುದ್ರು ಪರಿಸರದ ವಿಪ್ರ ವೇದಿಕೆ­ಯನ್ನು ಉದ್ಘಾಟಿಸಿ ಮಾತನಾಡಿದರು.
ಐರೋಡಿ ಗ್ರಾ.ಪಂ. ಅಧ್ಯಕ್ಷ ಕಸ್ತೂರಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹರೀಶ್ ಮಧ್ಯಸ್ಥ ಮುಖ್ಯ ಅತಿಥಿಗಳಾಗಿ ಉಪ­ಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಬಾಳ್ಕುದ್ರು ಸುಬ್ರಹ್ಮಣ್ಯ ಆಚಾರ್ಯ ಅವರಿಗೆ ಸ್ವಉದ್ಯೋಗಕ್ಕಾಗಿ ಲ್ಯಾಪ್‌­ಟಾಪ್ ಮತ್ತು ಪ್ರಿಂಟರ್, ಐರೋಡಿ ಸುಬ್ರಹ್ಮಣ್ಯ ಹೆಬ್ಬಾರ್ ಇವರ ಮನೆಗೆ ಸೋಲಾರ್ ಲೈಟ್ ಕೊಡುಗೆ ಮತ್ತು ಎಂಜಿನಿಯರಿಂಗ್ ವ್ಯಾಸಂಗ ಮಾಡು­ತ್ತಿರುವ ಕಾರ್ತಿಕ್ ಹೆಬ್ಬಾರ್ ಅವರಿಗೆ ವಿದ್ಯಾನಿಧಿ ವಿತರಿಸಲಾಯಿತು.
ವಿಪ್ರ ವೇದಿಕೆಯ ವತಿಯಿಂದ ಹಿರಿಯ­ರಾದ ಬಿ.ಅನಂತನಾರಾಯಣ ಐತಾಳ್, ಸೀತಾರಾಮ ಕಲ್ಕೂರ ದಂಪತಿಗಳು ಮತ್ತು ಮೀನಾಕ್ಷಿಯಮ್ಮ, ಬಿ.ಪಿ.­ಲಲಿತಮ್ಮ ಇವರನ್ನು ಗೌರವಿಸ­ಲಾಯಿತು.
  ರವಿರಾಜ ಅಧಿಕಾರಿ ಪ್ರಾಸ್ತಾವಿಕ­ವಾಗಿ ಮಾತನಾಡಿದರು. ವೇದಿಕೆಯ ಅಧ್ಯಕ್ಷ ರಾಮನಾಥ ಅಲ್ಸೆ ಸ್ವಾಗತಿಸಿ­ದರು. ಕಾರ್ಯ­ದರ್ಶಿ ವಿಘ್ನೇಶ್ವರ ಅಡಿಗ ವಂದಿಸಿ­ದರು. ರಾಮದೇವ ಹಂದೆ ಕಾರ್ಯಕ್ರಮ ನಿರೂಪಿಸಿದರು.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com