ಸೆ. 15ರಿಂದ ಶಿರೂರು ಜೇಸಿ ಸಪ್ತಾಹ

ಶಿರೂರು: ಜೇಸಿ‌ಐ ಶಿರೂರು ಇದರ ಜೇಸಿ ಸಪ್ತಾಹ 2013 ಸೆ. 15 ರಿಂದ 22ರವರೆಗೆ ಶಿರೂರಿನಲ್ಲಿ ನಡೆಯಲಿದೆ. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಪ್ತಾಹ ಉದ್ಘಾಟಿಸಲಿದ್ದಾ‌ರೆ.

 ಮುದ್ದು ಕೃಷ್ಣ ಸ್ಪರ್ಧೆ, ನೃತ್ಯ ವೈವಿಧ್ಯ, ಕುಂದಾಪುರ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಯಕ್ಷನೃತ್ಯ ವೈಭವ ಕಾರ್ಯಕ್ರಮ ನಡೆಯಲಿದ್ದು ವಿಶೇಷ ಆಕರ್ಷಣೆಯಾಗಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಾಲ್ವನ ಪಾತ್ರದ ನೃತ್ಯ ನಡೆಯಲಿದೆ.

ಮಹಿಳೆಯರ ವಿಶೇಷ ಕಾರ್ಯಕ್ರಮ ಬೊಂಬಾಟ ಸ್ಪರ್ಧೆ, ಬಿಂದಾಸ್ ಬಹುಮಾನ, ಕನ್ನಡ ಕರಾವಳಿಯ ಕಲೆ, ಸಂಸ್ಕ್ರತಿಯ ಅನಾವರಣ ಕರಾವಳಿ ವೈಭವ, ಅಶೋಕ ಪೊಳಲಿ ಮತ್ತು ಬಳಗದವರಿಂದ ನಗೆಹನಿ, ಮಿಮಿಕ್ರಿ, ಹಾಸ್ಯಸಂಜೆ, ಕೋಳಿನೃತ್ಯ, ರಿಯಾಲಿಟಿ ಶೋ ಮಾದರಿಯಲ್ಲಿ ಸೂಪರ್ ದಂಪತಿ 2013 ಸ್ಪರ್ಧೆ, ಸಂಜನಾ ನೃತ್ಯ ತಂಡದಿಂದ ನೃತ್ಯ ವೈವಿಧ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕಲಾವತಿ ಪುತ್ರನ್ ಬಳಗದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಕಾರ್ಯಕ್ರಮದಲ್ಲಿ ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಉದ್ಯಮಿ ಮಂಜುನಾಥ ಬಿಲ್ಲವ ಮುಂಬಯಿ, ಚಿತ್ರನಟಿ ಮಾಳವಿಕ, ನಿರ್ಮಾಪಕ ಅಶುಬೆದ್ರ, ಕಥಾ ನಿರ್ದೇಶಕ ಜಗದೀಶ ಭಾವೆ ಭಾಗವಹಿಸಲಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com