ಶಿರೂರು ಜೇಸಿ ಸಪ್ತಾಹ ಉದ್ಘಾಟನೆ

ಬೈಂದೂರು : ಜೆ.ಸಿ.ಐ. ಶಿರೂರು ಇದರ ಜೇಸಿ ಸಪ್ತಾಹ - 2013 ನೇ ಸಾಂಸ್ಕ್ರತಿಕ ಸಂಭ್ರಮವನ್ನು ಪೇಟೆ ವೆಂಕಟರಮಣ ಸಭಾಭವನದಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
        ಈ ಸಂದರ್ಭದಲ್ಲಿ ಮಾತನಾಡಿ ಘನ ಭವಿಷ್ಯದ ದೇಶ ನಿರ್ಮಾಣದ ಗುರುತರ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಸಮಾಜದ ಮೇಲಿನ ಕಾಳಜಿ ಜನಪರ ಕಾರ್ಯಗಳನ್ನು ರೂಪಿಸುವ ಆಸಕ್ತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯ. ವಿಭಿನ್ನ ಚಿಂತನೆಗಳ ಮೂಲಕ ಜನಮನ ಗೆಲ್ಲುವ ಜೆ.ಸಿ.ಐ. ಸಪ್ತಾಹದಿಂದ ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಚಿಂತನೆಯ ವಾತಾವರಣ ಮೂಡುತ್ತದೆ. ಮತ್ತು ಸಂಘಟಿತರಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
     ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮ ಮೇಸ್ತ ಗ್ರಾಮೀಣ ಭಾಗದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಿಂದ ಗುರುತಿಸಿಕೊಂಡ ಜೆ.ಸಿ.ಐ. ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ ಎಂದರು.
     ಗ್ರಾಮ ಪುರೋಹಿತ ಶ್ಯಾಮ ಅವಭೃತರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಲಾಯಿತು. ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ಮೋಹನ್ ರೇವಣಕರ್, ಸಪ್ತಾಹ ಸಭಾಪತಿ ಶ್ರೀಕಾಂತ ಕಾಮತ್, ಜೇಸಿರೇಟ್ ಅಧ್ಯಕ್ಷ ಅನ್ವಿ ಪಿ. ಪ್ರಭು, ಜೂನಿಯರ್ ಜೇಸಿ ಕಾಶಿನಾಥ ಮೇಸ್ತ, ಯೋಜನಾಧಿಕಾರಿಯಾದ ಚಂದ್ರ ಕೊಠಾರಿ, ಮಂಜುನಾಥ ಪೂಜಾರಿ, ಜನಾರ್ಧನ ಪ್ರಭು, ಮಹಾದೇವ ಪೂಜಾರಿ ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಅಬ್ದುಲ್ ಅಶ್ವಕ್ ರವರಿಗೆ ಶಾಶ್ವತ ಚಿಕಿತ್ಸೆಗಾಗಿ 5 ಸಾವಿರ ಆರ್ಥಿಕ ನೆರವು ನೀಡಲಾಯಿತು. ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
    ಜೇಸಿ ಅಧ್ಯಕ್ಷ ಪ್ರಸಾದ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧಕ್ಷ ಗಿರೀಶ್ ಮೇಸ್ತ ಸ್ವಾಗತಿಸಿದರು. ಕಾರ್ಯದರ್ಶಿ ಅರುಣ್ ಕುಮಾರ್ ವಂದಿಸಿದರು.





ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com