ಕ.ರಾ. ಮುಕ್ತ ವಿ.ವಿ. ಪ್ರವೇಶಾತಿ ನವೀಕರಣ

ಉಡುಪಿ: ದ್ವಿತೀಯ ಬಿ.ಎ/ಬಿ.ಕಾಂ. ಮತ್ತು ಅಂತಿಮ ಎಂ.ಎ/ಎಂ.ಕಾಂ. ಶಿಕ್ಷಣ ಕ್ರಮಗಳಿಗೆ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಬೋಧನಾ ಸಾಮಗ್ರಿಗಳನ್ನು ಸ್ಥಳದಲ್ಲಿಯೇ ವಿತರಿಸಲಾಗುತ್ತದೆ.

ಪ್ರಾದೇಶಿಕ ಕೇಂದ್ರದಲ್ಲಿ 2011-12ನೇ ಸಾಲಿನಲ್ಲಿ ಪ್ರಥಮ ವರ್ಷದಲ್ಲಿ ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳು ಮಾತ್ರ ದ್ವಿತೀಯ ಬಿ.ಎ/ಬಿ.ಕಾಂ. ಮತ್ತು ಅಂತಿಮ ಎಂ.ಎ/ಎಂ.ಕಾಂ. ಪ್ರವೇಶಗಳನ್ನು ಪಡೆಯಬಹುದು. ಈಗಾಗಲೇ ಅಂಚೆ ಮೂಲಕ ಪ್ರವೇಶಾತಿ ಮತ್ತು ಶುಲ್ಕಗಳ ಅರ್ಜಿಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳು ನೇರವಾಗಿ ಪ್ರಾದೇಶಿಕ ಕೇಂದ್ರದಲ್ಲಿ ಪ್ರವೇಶ ಪಡೆಯಬಹುದು. ಹೆಚ್ಚಿನ ವಿಚಾರಣೆಗಾಗಿ ಹಾಗೂ ಡಿಪ್ಲೊಮಾ, ಬಿ.ಎಡ್‌/ಎಂ.ಎಡ್‌. ಸರ್ಟಿಫಿಕೇಟ್‌ ಕೋರ್ಸು ಹಾಗೂ ಇನ್ನಿತರ ಕೋರ್ಸುಗಳಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪಡೆಯಬಹುದು.

ತೃತೀಯ ವರ್ಷದ ಬಿ.ಎ/ಬಿ.ಕಾಂ. ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಕೇಂದ್ರದಲ್ಲಿ ಪ್ರವೇಶ ಮಾಡಿಕೊಳ್ಳುವುದಿಲ್ಲ. ಈ ವಿದ್ಯಾರ್ಥಿಗಳು ಕರಾಮುವಿ, ಪ್ರಧಾನ ಕಚೇರಿ, ಮೈಸೂರು ಇಲ್ಲಿನ ಉಪಕುಲಸಚಿವರು (ಪ್ರವೇಶಾತಿ) ಇವರಲ್ಲಿ ಅಂಚೆ ಮೂಲಕ ಅಥವಾ ನೇರವಾಗಿ ಪ್ರವೇಶ ಪಡೆಯಬೇಕು ಅಥವಾ ವಿದ್ಯಾರ್ಥಿಗಳು ದ್ವಿತೀಯ ವರ್ಷದಲ್ಲಿ ಪ್ರವೇಶ ಪಡೆದಿರುವ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶ ಪಡೆಯಬೇಕು.

ಬೇರೆ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು ಮುಕ್ತ ವಿವಿಯಲ್ಲಿ 2ನೇ ವರ್ಷಕ್ಕೆ ನೇರವಾಗಿ ಪ್ರವೇಶ ಬಯಸುವವರು ವಿವರಣಾ ಪುಸ್ತಕ ಪಡೆದು, ಪ್ರವೇಶ ಶುಲ್ಕ ಮತ್ತು ವಿವಿ ಬದಲಾವಣೆ ಶುಲ್ಕ ಎರಡನ್ನು ಪಾವತಿಸಿ ನೇರವಾಗಿ ವಿವಿ ಪ್ರಧಾನ ಕಚೇರಿಯ ಉಪಕುಲಸಚಿವರು (ಪ್ರವೇಶಾತಿ) ಇಲ್ಲಿ ಪ್ರವೇಶ ಪಡೆಯಬೇಕು ಎಂದು ಪ್ರಾದೇಶಿಕ ನಿರ್ದೇಶಕರು ತಿಳಿಸಿರುತ್ತಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com