ಕೊಡೇರಿ ಸೇತುವೆ ವಿವಾದ: ಪ್ರತಿಭಟನೆಗೆ ತಾತ್ಕಾಲಿಕ ಸ್ಥಗಿತ

ಬೈಂದೂರು: ಕೊಡೇರಿ ಬಂದರು ಜಟ್ಟಿ ಬಳಿಯೇ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಸ್ಥಳೀಯ ಮೀನುಗಾರರು ಎರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯ ಬಳಿಕ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 
     ಸೇತುವೆ ನಿರ್ಮಾಣದ ಸ್ಥಳವನ್ನು ಬದಲಾಯಿಸಲು ಅಧಿಕಾರಿಗಳು ಮುಂದಾಗಿರುವುದು ಖಂಡನೀಯ. ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಇಲ್ಲವಾದಲ್ಲಿ ನಿರ್ಮಾಣವನ್ನು ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರಾರು ಪಟ್ಟು ಹಿಡಿದ ಕಾರಣ ಎರಡನೇ ದಿನ ಸಹಾಯಕ ಎಂಜಿನಿಯರ್‌ ರಾಥೋಡ್‌ ಹಾಗೂ ಎನ್‌.ಬಿ.ಖಾರ್ವಿ ಅವರು ಸ್ಥಳಕ್ಕೆ ಆಗಮಿಸಿದರು. ಬೈಂದೂರು ವೃತ್ತ ನಿರೀಕ್ಷಕ ಅರುಣ್‌ ನಾಯಕ್‌ ಹಾಗೂ ಎಂಜಿನಿಯರ್‌ಗಳ ನಡುವೆ ಮಾತುಕತೆ ನಡೆಸಿದರು. ಆರಂಭದಲ್ಲಿ ಬಿಸಿ ಬಿಸಿ ಮಾತುತೆ ನಡೆದು ಸ್ಥಳ ಬದಲಾವಣೆಗೆ ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಎಂಜಿನಿಯರ್‌ ರಾಥೋಡ್‌ ಅವರು ಪ್ರತಿಭಟನಾಕಾರರಿಗೆ ಇದು ತಾಂತ್ರಿಕ ವಿಷಯವಾದುದರಿಂದ ಮುಂದಿನ ತಿಂಗಳ ಒಳಗಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.

ಈ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದೆಗೆದುಕೊಳ್ಳಲಾಯಿತು. ಆದರೆ ಇದೇ ಪುನಾರವರ್ತನೆಗೊಂಡರೆ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com