ಕುಂದಾಪುರ - ಕೋಡಿ ಸೇತುವೆ ಶೀಘ್ರ ಕಾಮಗಾರಿ

ಕುಂದಾಪುರ: ಕುಂದಾಪುರ - ಕೋಡಿ ಸೇತುವೆ ರಚನೆಗೆ ಇಲಾಖೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿಸಿದೆ. ಆದಷ್ಟು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕುಂದಾಪುರ - ಆನಗಳ್ಳಿ ಸೇತುವೆ ನಿರ್ಮಾಣದ ಅಂದಾಜು ಪಟ್ಟಿ 8 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಆದಷ್ಟು ಶೀಘ್ರದಲ್ಲಿ ಇಲಾಖೆಯ ತಾಂತ್ರಿಕ ಮಂಜೂರಾತಿ ಮಾಡಿ ಸೇತುವೆ ರಚನೆ ಪ್ರಕ್ರಿಯೆಗೆ ಮುಂದಾಗುವಂತೆ ಇಲಾಖೆಯ ಹಿರಿಯ ಅಧಿಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಸೇತುವೆ ನಿರ್ಮಾಣದ ಪ್ರಕ್ರಿಯೆಗೆ ಆದ್ಯತೆ ನೀಡುವಂತೆ ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸವಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಈ ಬಾರಿ ಶತಮಾನೋತ್ಸವ ಆಚರಿಸುತ್ತಿರುವ ಕುಂದಾಪುರದ ಹಿರಿಯ ಶಿಕ್ಷಣ ಸಂಸ್ಥೆಯಾದ ಖಾರ್ವಿಕೇರಿಯಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಸದರ ನಿಧಿಯಲ್ಲಿ 5 ಲಕ್ಷ ರೂ. ಸೇರಿದಂತೆ ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 28 ಲಕ್ಷ ರೂ. ಅನುದಾನ ಜೋಡಣೆ ಮಾಡಲಾಗಿದೆ ಎಂದು ಸಂಸದ ಹೆಗ್ಡೆ ತಿಳಿಸಿದರು.

ಮಲ್ಯಾಡಿ ಶಿವರಾಮ ಶೆಟ್ಟಿ, ಬಿ. ಹೆರಿಯಣ್ಣ, ಗಣೇಶ್‌ ಶೇರುಗಾರ್‌, ದಿವಾಕರ್‌ ಶೆಟ್ಟಿ, ದೇವಕಿ ಪಿ. ಸಣ್ಣಯ್ಯ, ಜೇಕಬ್‌ ಡಿಸೋಜಾ, ದೇವಾನಂದ ಶೆಟ್ಟಿ, ಕಾಳಪ್ಪ ಪೂಜಾರಿ, ಚಂದ್ರಶೇಖರ ಖಾರ್ವಿ, ವಿನೋದ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಶ್ರೀಧರ ಶೇರುಗಾರ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com