ಕುಂದಾಪುರ: ನಗರದ ಗಾಂಧಿ ಪಾರ್ಕಿನಲ್ಲಿ ಬರ್ತಡೇ ಪಾರ್ಟಿಯನ್ನು ಆಚರಿಸುತ್ತಿದ್ದ ಕಾಲೇಜೊಂದರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾರ್ವಜನಿಕವಾಗಿ ಅಸಂಬದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಠಾಣೆಗೆ ದೂರು ಬಂದ ಹಿನ್ನಲೆಯಲ್ಲಿ ಕುಂದಾಪುರ ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.
ಆರು ಮಂದಿ ವಿದ್ಯಾರ್ಥಿನಿಯರು ಹಾಗೂ ನಾಲ್ವರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯೊಬ್ಬಳ ಹುಟ್ಟು ಹಬ್ಬದ ಪಾರ್ಟಿಗೋಸ್ಕರ ಬಂದಿದ್ದಾಗ ಊಟದ ಸಮಯದ ತನಕ ಪಾರ್ಕಿನಲ್ಲಿ ಕುಳಿತು ಹರಟೆಹೊಡೆಯುತ್ತಿದ್ದರು. ಇದೇ ಸಮಯದಲ್ಲಿ ಅವರು ಅಲ್ಲಿ ಚೆಲ್ಲಾಟ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಅವರೆನ್ನಲ್ಲಾ ಕರೆದು ಮಹಿಳಾ ಠಾಣೆಗೆ ಕರೆದೋಯ್ದು ಪೋಷಕರನ್ನು ಬರಹೇಳಿ ಬುದ್ದಿ ಹೇಳಿ ಮನಗೆ ಕಳಹಿಸಿದ್ದಾರೆ.
0 comments:
Post a Comment