ಕೊಳೆ ರೋಗ ಪರಿಹಾರ ಮೊತ್ತ ಹೆಚ್ಚಳಕ್ಕೆ ರೈತ ಸಂಘ ಆಗ್ರಹ

ಕುಂದಾಪುರ: ಕೊಳೆ ರೋಗದಿಂದ ಬೇಸತ್ತ ಅಡಕೆ ಬೆಳೆಗಾರರಿಗೆ ಪರಿಹಾರ ನೀಡುತ್ತೇವೆ ಎನ್ನುವುದು ಸರಕಾರದ ಆಶ್ವಾಸನೆ ಮಾತ್ರವಾಗಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಪ್ರಕೃತಿ ವಿಕೋಪದಡಿಯಲ್ಲಿ ನೀಡುತ್ತಿರುವ ಪರಿಹಾರವನ್ನು ಹೆಚ್ಚಿಸಬೇಕು, ಸೂಕ್ತ ನ್ಯಾಯವನ್ನು ಒದಗಿಸಬೇಕು ಇಲ್ಲವಾದಲ್ಲಿ ಉಡುಪಿ ಜಿಲ್ಲಾ ರೈತಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದೀಪಕ್‌ ಕುಮಾರ ಶೆಟ್ಟಿ ಹೇಳಿದ್ದಾರೆ.

ವಿಪರೀತ ಮಳೆಯಿಂದ ನಷ್ಟ ಅನುಭವಿಸಿದ ಅಡಿಕೆ ಬೆಳೆಗಾರರಿಗೆ ಪರಿಯಾರ ಘೋಷಣೆಯಾಗಿದ್ದು. ಉಡುಪಿ ಜಿಲ್ಲೆಯ ಬೆಳೆಗಾರರಿಗೆ ಹೆಕ್ಟೇರ್‌ಗೆ ಗರಿಷ್ಠ 12 ಸಾವಿರ ರೂ ಹಾಗೂ ಎಕರೆಗೆ 4800 ಪಡೆಯಬಹುದಾಗಿದೆ ಎನ್ನುವುದು ಕೇವಲ ಆಶ್ವಾಸನೆಯಾಗಿದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗಿದ್ದು ಇಲಾಖೆ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕುಂದಾಪುರದ ಕೇಂದ್ರ ಸ್ಥಾನದಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದ ಅಧಿಕಾರಿಗಳ ನೇಮಕಾತಿ ಆಗದೇ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ.

ಉಡುಪಿ ಜಿಲ್ಲೆಯ ಎಲ್ಲಾ ಹೆಚ್ಚಿನ ರೈತರು ಕೃಷಿಯನ್ನೆ ತಮ್ಮ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡಿದ್ದು, ಹೆಚ್ಚಿನ ರೈತರು ಬಡ ಕೂಲಿ ಕಾರ್ಮಿಕರಾಗಿರುತ್ತಾರೆ. ಹಿಂದೋಮ್ಮೆ ರೈತರು ರೈತ ಸಂಘದ ಮುಖಾಂತರ ಅಡಿಕೆ ಕೊಳೆರೋಗಕ್ಕೆ ಅರ್ಜಿಯನ್ನು ಸರಿಯಾದ ಮಾಹಿತಿಯೊಂದಿಗೆ ಸಂಬಂಧಪಟ್ಟ ಕಚೇರಿಗೆ ನೀಡಿದರೂ ಸಹ ಯಾವುದೇ ಪರಿಹಾರ ನೀಡಿಲ್ಲ ಇದರಿಂದ ನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ರೈತರಿಗೆ ಅಡಿಕೆ ಕೊಳೆರೋಗದಿಂದ ಲಕ್ಷಾಂತರ ರೂ. ನಷ್ಟವಾಗಿದೆ.

ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಈ ವಿಷಯಕ್ಕೆ ಬೆಂಬಲ ನೀಡಬೇಕು, ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯವಾದಲ್ಲಿ ಸರಕಾರ ಕೂಡಲೇ ಪರಿಹರ ಘೋಷಣೆ ಮಾಡುತ್ತಾರೆ. ಉಡುಪಿ, ದಕ್ಷಿಣ ಕನ್ನಡ, ಹಾಗೂ ಶಿವಮೊಗ್ಗದ ರೈತರಿಗೆ ಅನ್ಯಾಯವಾದಲ್ಲಿ ಸರಕಾರ ಪರಿಹಾರ ನೀಡಲು ನಿರ್ಲಕ್ಷ ತೋರಿಸುವ ಧೋರಣೆ ಸರಿಯಲ್ಲ ಎಂದು ಅವರು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com