ಕಾರಂತರ ಹೆಸರಿನ ಪ್ರಶಸ್ತಿ ನನಗೆ ನೊಬೆಲ್ ಇದ್ದಂತೆ:ಪಿ.ಪಿ. ಲಕ್ಷ್ಮಣನ್‌

ಕುಂದಾಪುರ: ತುರ್ತು ಪರಿಸ್ಥಿತಿ ಸಂದರ್ಭ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸಿದ ಡಾ.ಶಿವರಾಮ ಕಾರಂತ ವಿಕ್ಷಿಪ್ತ ಮನಸ್ಸಿನವರು ಎಂದು ಭಾವಿಸಿದರೆ ಅದು ತಪ್ಪು. ಡಾ.ಕೋಟ ಶಿವರಾಮ ಕಾರಂತ ಈ ದೇಶಕ್ಕೆ ಮಹಾತ್ಮ ಗಾಂಧೀಜಿಯವರಷ್ಟೇ ಪ್ರಾಮುಖ್ಯರು. ಡಾ.ಕಾರಂತರ ನಂತರ ದೇಶ ಆ ಪರಿಯ ವ್ಯಕ್ತಿತ್ವ ಕಂಡಿಲ್ಲ. ಕಾರಂತರ ಹೆಸರಿನಲ್ಲಿ ಸ್ವೀಕರಿಸಿದ ಈ ಪ್ರಶಸ್ತಿ ನನ್ನ ಪಾಲಿಗೆ ನೊಬೆಲ್ ಪ್ರಶಸ್ತಿ ಇದ್ದಂತೆ ಎಂದು ಅಖಿಲ ಭಾರತ ಫುಟ್ಬಾಲ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಪಿ.ಪಿ.ಲಕ್ಷ್ಮಣನ್ ಹೇಳಿದರು. 

ಇಲ್ಲಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ  ಕೈರಳಿ ಸುಹ್ರದ್ವೇದಿ ಸಂಘಟನೆ ಹಮ್ಮಿಕೊಂಡ ಓಣಂ ಸಮಾರಂಭದಲ್ಲಿ ಅವರು ಡಾ.ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

ಡಾ.ಶಿವರಾಮ ಕಾರಂತರ ಅನೇಕ ಕತಿಗಳು ಮಲಯಾಳ ಭಾಷೆಗೆ ಅನುವಾದಗೊಂಡಿವೆ. ಅದರ ಪೆಕಿ ಒರಿದುಂಡು ಭೂಮಿ ಸಿನಿಮಾ ಆಗಿದೆ. ಅವರು ಗರ್ಭಗುಡಿ ನಾಟಕ ಕೇರಳದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದೆ ಎಂದು ವಿವರಿಸಿದ ಅವರು, ಬಡತನದ ಕಾರಣ ನಾನು ಮೆಟ್ರಿಕ್ ಕೂಡ ತೇರ್ಗಡೆಯಾಗಲಿಲ್ಲ. ಆದರೆ 16 ಹರೆಯದಲ್ಲಿಯೇ ಪೂರ್ವ ಆಫ್ರಿಕಾದಿಂದ ನನ್ನ ಜೀವನ ಆರಂಭಗೊಂಡಿತ್ತು. ಆಫ್ರಿಕಾ ದೇಶಗಳು ಸೇರಿದಂತೆ ಹತ್ತು ಹಲವು ರಾಷ್ಟ್ರಗಳನ್ನು ಅವಲೋಕಿಸಿದಾಗ ಭಾರತ ಮೇಲ್ಪಂಕ್ತಿಯಲ್ಲಿದೆಎಂದರು. 

ಸಚಿವ ವಿನಯಕುಮಾರ್ ಸೊರಕೆ ಪ್ರಶಸ್ತಿ ಪ್ರದಾನ ಮಾಡಿ, ಕರ್ನಾಟಕ ಕರಾವಳಿಗೂ ಹಾಗೂ ಕೇರಳಕ್ಕೂ ನಿಕಟ ಸಂಬಂಧವಿದೆ. ಶಂಕರಾಚಾರ್ಯರು, ನಾರಾಯಣಗುರು, ಗುರು ನಿತ್ಯಾನಂದ, ಮಾತಾಅಮತಾನಂದಮಯಿಯವರಿಂದ ಕರ್ನಾಟಕ ಮತ್ತು ಕೇರಳದ ಬಾಂಧವ್ಯ ವೃದ್ಧಿಸುತ್ತಲೆ ಇದೆ ಎಂದರು. 

ಕೇರಳ ಮಾತಾ ಅಮತಾನಂದಮಯಿ ಮಠದ ಶ್ರೀ ಅಮೃತಾಕೃಪಾ ನಂದಪುರಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಕೈರಳಿ ಸುಹ್ರದ್ವೇದಿ ಸಂಘಟನೆ ಅಧ್ಯಕ್ಷ ಕೆ.ಪಿ. ಶ್ರೀಶನ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಕುಂದಪ್ರಭ ಅಧ್ಯಕ್ಷ ಯು.ಎಸ್.ಶೆಣೆ, ರೋಟರಿ ಕ್ಲಬ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಮನೋಜ್ ನಾಯರ್ ಸ್ವಾಗತಿಸಿದರು. ಡಾ. ಪಾರ್ವತಿ ಜಿ. ಐತಾಳ್ ಮತ್ತು ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕೊ.ಶಿವಾನಂದ ಕಾರಂತ ಸನ್ಮಾನಪತ್ರ ವಾಚಿಸಿದರು. ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರ್ವಹಿಸಿದರು. ಕೆ.ಕೆ. ರಾಮನ್ ವಂದಿಸಿದರು. 

* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com