ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ''''ಕ್ರಾಂತಿ - 2013'' ಸರ್‌.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಅನಾವರಣ

ಮೂಡ್ಲಕಟ್ಟೆ : ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವವನ್ನು ಇಂದಿನ ಯುವಪೀಳಿಗೆ ರೂಢಿಸಿಕೊಳ್ಳುವುದರೊಂದಿಗೆ ಅವರ ಸಾಧನೆಯ ಮಾದರಿ ಅನುಸರಿಸುವುದರಿಂದ ಅರ್ಥಪೂರ್ಣ ಜೀವನ ಸಾಧ್ಯ. ಅಂತಹ ಮೇರು ವ್ಯಕ್ತಿತ್ವದ ಮಹಾಪುರುಷನ ಪ್ರತಿಮೆಯನ್ನು ಕಾಲೇಜಿನಲ್ಲಿ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.
     ಅವರು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ಪೋರ್ಸ್‌ ವಿಭಾಗದವರು ಆಯೋಜಿಸಿದ 'ಕ್ರಾಂತಿ - 2013 'ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾದ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
     ಗ್ರಾಮೀಣ ಪ್ರದೇಶದ ಮೂಡ್ಲಕಟ್ಟೆಯಲ್ಲಿ ತಾಂತ್ರಿಕ ವಿದ್ಯಾಲಯ ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಹುಟ್ಟುಹಾಕಿದ ಮಾಜಿ ಸಂಸದ ಐ.ಎಂ. ಜಯರಾಂ ಶೆಟ್ಟಿ ಅವರು ಅಭಿನಂದನಾರ್ಹರು ಎಂದು ಅವರು ಹೇಳಿದರು.
       ಕಾಲೇಜಿನ ಅಧ್ಯಕ್ಷ ಸಿದ್ದಾರ್ಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ| ಜಿ.ಪಿ. ಶೆಟ್ಟಿ, ಮಂಗಳೂರು ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲಾºವಿ, ಪುರಸಭಾ ಉಪಾಧ್ಯಕ್ಷ ನಾಗರಾಜ್‌ ಕಾಮಧೇನು, ಲೋಕೋಪಯೋಗಿ ಗುತ್ತಿಗೆದಾರ ಸುಂದರ ಶೆಟ್ಟಿ , ಕಾಲೇಜಿನ ನಿರ್ದೇಶಕ ಡಾ| ಬಿ.ಆರ್‌. ಸಾಮಗ, ಪ್ರಾಂಶುಪಾಲೆ ಶುಭಾ ಪಿ. ಭಟ್‌, ಸಿವಿಲ್‌ ವಿಭಾಗದ ಮುಖ್ಯಸ್ಥೆ ಶಶಿಕಲಾ, ಪೋರ್ಸ್‌ನ ಅಧ್ಯಕ್ಷ ಕಾರ್ತಿಕ್‌ ಗೌಡ ಮೊದಲಾದವರು ಉಪಸ್ಥಿತರಿದ್ದರು.
      ಈ ಸಂದರ್ಭ ಕಾಲೇಜಿನ ಸ್ಮರಣ ಸಂಚಿಕೆ 'ಅದ್ವಿಕ್‌'ನ್ನು ಸಚಿವ ಸೊರಕೆ ಬಿಡುಗಡೆಗೊಳಿಸಿದರು. ಪೋರ್ಸ್‌ ಉಪಾಧ್ಯಕ್ಷ ಪೂರ್ವಿ ಎಸ್‌.ನಾಯಕ್‌ ಸ್ವಾಗತಿಸಿದರು. ಪೂಜಾ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com