ಮುಸ್ಲಿಂ ಸಾಹಿತ್ಯ ಪ್ರಶಸ್ತಿ: ಕೃತಿ ಆಹ್ವಾನ

ಮಂಗಳೂರು: ಮಂಗಳೂರು ಮುಸ್ಲಿಮ್‌ ಲೇಖಕರ ಸಂಘ ನೀಡುವ 2012ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿಗಾಗಿ ರಾಜ್ಯದ ಮುಸ್ಲಿಂ ಬರೆಹಗಾರರಿಂದ ಕನ್ನಡ ಕೃತಿಗಳನ್ನು ಆಹ್ವಾನಿಸಲಾಗಿದೆ.

ಒಂದು ಅಥವಾ ಒಂದಕ್ಕಿಂತ ಹೆಚ್ಚು ಕೃತಿಗಳನ್ನು ಕಳುಹಿಸಬಹುದು. ರಾಜ್ಯದ ಹೊರಗೆ ನೆಲೆಸಿರುವ ಕನ್ನಡ ಮುಸ್ಲಿಂ ಬರೆಹಗಾರರ ಕೃತಿಗಳನ್ನು ಪ್ರಶಸ್ತಿಗೆ ಕಳುಹಿಸಿಕೊಡಬಹುದು. ಪ್ರಶಸ್ತಿಗೆ ಕಳುಹಿಸಿದ ಕೃತಿಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.

ಪ್ರಶಸ್ತಿಯು 5,000 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಲೇಖಕರು 2012ರಲ್ಲಿ ಪ್ರಕಟವಾದ ತಮ್ಮ ಸ್ವಂತ ಕೃತಿಗಳ ನಾಲ್ಕು ಪ್ರತಿಗಳನ್ನು ಅ. 15ರೊಳಗೆ (ಅನುವಾದಿತ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ) ಸಂಚಾಲಕರು, 'ಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿ', ಮುಸ್ಲಿಮ್‌ ಲೇಖಕರ ಸಂಘ, ಹಿದಾಯತ್‌ ಸೆಂಟರ್‌, ಬೀಬಿ ಅಲಾಬಿ ರಸ್ತೆ, ಮಂಗಳೂರು- ಇಲ್ಲಿಗೆ ಕಳುಹಿಸಿಕೊಡಬಹುದು ಎಂದು ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com