ನಾಪತ್ತೆಯಾದ ಬೆಂಗಳೂರು ಯುವಕ ಮಾನಸಿಕ ಅಸ್ವಸ್ಥನಾಗಿ ಕುಂದಾಪರದಲ್ಲಿ ಪತ್ತೆ

ಕುಂದಾಪುರ: ಕಳೆದ ಮಾರ್ಚ್ ತಿಂಗಳಲ್ಲಿ ಬೇಂಗಳೂರಿನ ತನ್ನ ಮನೆಯಿಂದ ಕಾಣೆಯಾಗಿದ್ದ ಯುವಕನೋರ್ವ ಬರೋಬ್ಬರಿ ಏಳು ತಿಂಗಳುಗಳನ್ನು ಕಾಲ್ನಡಿಗೆಯಲ್ಲಿಯೇ ಸವೆಸಿ ತೀರಾ ಮಾನಸಿಕ ಹಾಗೂ ದೈಹಿಕ ಅಸ್ವಸ್ಥ ಸ್ಥಿತಿಯಲ್ಲಿ ಕುಂದಾಪುರದ ಮಸೀದಿ ಪರಿಸರದಲ್ಲಿ ಪತ್ತೆಯಾಗಿದ್ದು ಸ್ಥಳೀಯರ  ಸಹಕಾರ, ಸಮಯ ಪ್ರಜ್ನೆಯಿಂದ ಮಗನನ್ನು ಹುಡುಕಿ ಹುಡುಕಿ ಕಂಗಾಲಾಗಿದ್ದ ಹೆತ್ತವರ ಮಡಿಲು ಮತ್ತೆ ಸೇರಿದ್ದಾನೆ 
     ಬೆಂಗಳೂರು ಶಿವಾಜಿನಗರ ಟ್ಯಾನರಿಯ ಪಿಎನ್ಟಿ ಕಾಲನಿಯ ರಿಯಲ್ ಎಸ್ಟೇಟ್ ಉದ್ಯಮಿ ಶಾಬುದ್ದೀನ್ ಅವರ ಹಿರಿಯ ಮಗ ಅಜರುದ್ದೀನ್(26) ಮನೆಯಿಂದ ಕಳೆದ ಮಾರ್ಚ ತಿಂಗಳಲ್ಲಿ ಏಕಾಏಕಿ ಕಾಣೆಯಾಗಿದ್ದ. ಹೈಸ್ಕೂಲಿಗೆ ಹೋಗುತ್ತಿದ್ದ ಅಜರ್ ಕಳೆದ ಎಂಟು ವರ್ಷಗಳ ಹಿಂದೆ ಜರಗಿದ ಅಫಘಾತವೊಂದರಲ್ಲಿ ಕೊಂಚ ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದು ತದನಂತರ ಮನೆಯವರ ಪಾಲನೆಯಲ್ಲಿದ್ದ.ಆದರೆ ಅಂದು ಮನೆಯವರ ಕಣ್ಣು ತಪ್ಪಿಸಿ ಉಟ್ಟ ಬಟ್ಟೆಯಲ್ಲಿಯೇ ಮನೆಯಿಂದ ಹೊರಟ ಈತ ಯಾವುದೇ ಗಮ್ಯವಿಲ್ಲದೇ ನಡೆಯುತ್ತಾಸಾಗಿ ಮೊನ್ನೆಯಷ್ಟೇ ಕುಂದಾಪುರದ ಮಸೀದಿ ಪರಿಸರದಲ್ಲಿ ತೀರಾ ನಿತ್ರಾಣ ಸ್ಥಿತಿಯಲ್ಲಿ ಬಿದ್ದು ಕೊಂಡಿದ್ದ .ಇವನನ್ನು ಗಮನಿಸಿದ ಸ್ಥಳೀಯ ಮುಸ್ಲೀಮ್ ವೆಲ್ ಫೇರ್ನ ಸದಸ್ಯರು ಸಮಾಜ ಸೇವಕ ಅಬ್ಬು ಅವರ ನೇತ್ರತ್ವದಲ್ಲಿ ಯುವಕನನ್ನು ಉಪಚರಿಸಿ ಆತನಿಂದ ಬೆಂಗಳೂರಿನ ಅವನ ವಿಳಾಸವನ್ನು ಅಸ್ಪಷ್ಟ ರೀತಿಯಲ್ಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.ಸ್ಥಳೀಯ ಕೋಲಾ ಬಶೀರ್ ಅವರು ಯುವಕನ ಪೋಟೊವನ್ನು ತೆಗೆದು ನೆಟ್ ಮೂಲಕ ಬೆಂಗಳೂರಿನಲ್ಲಿರುವ ತನ್ನ ಅಳಿಯ ಸಲೀಮರವರಿಗೆ ರವಾನಿಸಿ ಮಾಹಿತಿ ನೀಡಿದ್ದರು. ಅದರಂತೆ ಸತತ ಹುಡುಕಾಟದ ನಂತರ ಕೊನೆಗೂ ಅಜರ್ ನ ಹೆತ್ತವರನ್ನು ಸಂಪರ್ಕಿಸಿದ ಸಲೀಮ್ ಘೋಫಣೆಯಾದ ಅವರ ಮಗ ಕುಂದಾಪುರದಲ್ಲಿ ಪತ್ತೆಯಾಗಿರುವ ಸಂತಸದ ವಿಷಯ ತಿಳಿಸಿದ್ದರು. 
 ಅಷ್ಟರ ತನಕ ಪೋಲಿಸ್ ಪಿರ್ಯಾದಿ, ಮಾದ್ಯಮಗಳು ಸ್ಭೆರಿದಂತೆ  ಹತ್ತು  ಹಲವು ಕಡೆ ಮಗನನ್ನು ಹುಡುಕಿ ನಿರಾಶರಾಗಿ ಕೈ ಚೆಲ್ಲಿ ಕುಳಿತಿದ್ದ ಮನೆಯವರು ಸಂಭ್ರಮದಿಂದ ಕುಂದಾಪುರಕ್ಕೆ ಆಗಮಿಸಿದ್ದರು. ಮಗನನ್ನು ಉಪಚರಿಸಿ ತಮ್ಮನ್ನು ಸೇರಿಸುವಲ್ಲಿ  ಶ್ರಮವಹಿಸಿದ ಸ್ಥಳೀಚಿiÀುರಿಗೆ ಹೃತ್ವೂರ್ವಕ ಕೃತಜÐತೆ ಸಲ್ಲಿಸಿ ಅಜರ್ ನೊಂದಿಗೆ ಬೆಂಗಳೂರಿನ ರೈಲು ಹತ್ತಿದವರ ಕಂಗಳಲ್ಲಿ ಆನಚಿದ ಬಾಷ್ಪ ಹರಿದಿತ್ತು.

ವರದಿ: ಸುಧಾಕರ್ ವಕ್ವಾಡಿಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com