ಬೈಂದೂರು ಚರ್ಚನಲ್ಲಿ ತೆನೆಹಬ್ಬ

ಬೈಂದೂರು: ಕರಾವಳಿಯ ಕ್ರೈಸ್ತರ ಪವಿತ್ರ ಹಬ್ಬ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಅನ್ನು  ಇಲ್ಲಿನ ಹೋಲಿಕ್ರಾಸ್ ಚರ್ಚನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. 
    ಧರ್ಮಗುರು ರೆ. ಫಾ. ರೋನಾಲ್ಡ್ ಮೀರಾಂದರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆರವಣಿಗೆಯ ಮೂಲಕ ತೆನೆಯನ್ನು ತಂದು ಶುದ್ಧೀಕರಿಸಿ ದಿವ್ಯ ಬಲಿ ಪೂಜೆಯನ್ನು ಮಾಡಲಾಯಿತು. ವಿಧಿ ವಿಧಾನಗಳನ್ನು ಕೈಗೊಂಡ ಬಳಿಕ ನೆರೆದಿದ್ದ ಬಂಧುಗಳಿಗೆ ಕಬ್ಬನ್ನು ಹಂಚಿ ಸಂಭ್ರಮಿಸಿದರು.


 

ಸಾಂಸ್ಕೃತಿಕ ಕಾರ್ಯಕ್ರಮಗಳು


ಬೈಂದೂರು: ಇಂದಿನ ಯುವ ಪೀಳಿಗೆ ಮೊಬೈಲ್, ಕಂಪ್ಯೂಟರ್ ಮೊದಲಾದ ಸಾಧನಗಳನ್ನು ಅತಿರೇಕವಾಗಿ ಉಪಯೋಗಿಸದೇ, ನಮ್ಮಲ್ಲಿರುವ ಪ್ರತಿಭೆಯನ್ನು ಹೂ ಅರಳಿದಂತೆ ಪೂರ್ಣ ಪ್ರಮಾಣದಲ್ಲಿ ಪ್ರಚುರಪಡಿಸಿ ನಮ್ಮ ಸಾಧನೆಯನ್ನು ಜಗತ್ತಿಗೆ ತೋರಿಸುವಂತಾಗಬೇಕು ಎಂದು ರೆ.ಫಾ. ರೋನಾಲ್ಡ್ ಮಿರಾಂದ ಹೇಳಿದರು.
      ಅವರು ಇಲ್ಲಿನ ಹೊಲಿಕ್ರಾಸ್ ಚರ್ಚ್‌ನಲ್ಲಿ ತೆನೆಹಬ್ಬದ ಪ್ರಯುಕ್ತ ಕ್ಯಾಥೋಲಿಕ್ ಯುವ ಸಂಘಟನೆಯ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
       ತ್ರಾಸಿಯಾ ರೊಬೊರ್ಟ್ ಒಲಿವೇಶಾ, ಡೊನ್‌ಬಾಸ್ಕೋ ಶಿಕ್ಷಣ ಸಂಸ್ಥೆಯ ಮರಿಯಾ ಕ್ರಾಸ್ತ, ಕಾರ್ಯದರ್ಶಿ ಸಿಸಿಲಿಯೋ ರೆಬೆರೋ, ಸಲಹೆಗಾರರಾದ ಹೆನ್ರಿ ಲೋಬೊ, ಶಾಂತಿ ಪಿರೇರಾ, ಕಾರ್ಯದರ್ಶಿ ಕ್ವಿನ್ಸಿ ರೆಬೆರೋ ಉಪಸ್ಥಿತರಿದ್ದರು.ನಂತರ ಕ್ರೀಡೆಯಲ್ಲಿ ವಿಜೇತರಾದವರಿಗೆ ಸಿಸ್ಟರ್ ಅಂತೋನಿಯಮ್ಮನವರು ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸಂತ ಸೆಬೆಸ್ಟಿಯನ್ ವಲಯ ಹಾಗೂ ದ್ವಿತೀಯ ಸ್ಥಾನ ಪಡೆದ ಯಡ್ತರೆ ವಲಯ ಇವರಿಗೆ ರೆ.ಫಾ. ರೋನಾಲ್ಡ್ ಮಿರಾಂದ ರವರು ವಿಶೇಷ ಫಲಕ ನೀಡಿ ಶುಭ ಹಾರೆಸಿದರು.
ಚಿತ್ರಗಳು: ಲಾರೆನ್ಸ್ ಫೆರ್ನಾಂಡಿಸ್ 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com