25ರಿಂದ ಕುಂದಾಪುರದಲ್ಲಿ ಮಂಗಳೂರು-ಮುಂಬಯಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ

ಕುಂದಾಪುರ:  ಇಲ್ಲಿನ ಜನತೆಯ ಬಹು ಬೇಡಿಕೆಯ ಮುಂಬೈ - ಮಂಗಳೂರು ಸಿಎಸ್‌ಟಿ ಎಕ್ಸ್‌ಪ್ರೆಸ್‌ ರೈಲು ಕುಂದಾಪುರದಲ್ಲಿ ಸೆ.25 ರಿಂದ ನಿಲುಗಡೆಯಾಗಲಿದೆ ಎಂದು ಕೊಂಕಣ ರೈಲ್ವೆ ನಿಗಮ ತಿಳಿಸಿದೆ. 
  
 ಪ್ರಾಯೋಗಿಕ ನೆಲೆಯಲ್ಲಿ ಸೆ.25ರಿಂದ ಮುಂದಿನ ಆರು ತಿಂಗಳು ರೈಲಿಗೆ ನಿಲುಗಡೆ ಅವಕಾಶ ನೀಡಲಾಗಿದ್ದು, ಮುಂದಿನ ಬೆಳವಣಿಗೆ ನೋಡಿ ನಿಲುಗಡೆ ಕಾಯಂಗೊಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.

    ಸಿಎಸ್‌ಟಿ ರೈಲು ಪ್ರತಿದಿನ ಸಂಜೆ 4.40ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 6.15ಕ್ಕೆ ಕುಂದಾಪುರವನ್ನು ಹಾಗೂ ಮರುದಿನ 11.30ಕ್ಕೆ ಮುಂಬೈ ತಲುಪಲಿದೆ. ಅದೇ ರೀತಿ ಮುಂಬೈಯಿಂದ ರಾತ್ರಿ 10.30ಕ್ಕೆ ಮುಂಬಯಿಯಿಂದ ಹೊರಟು ಮರುದಿನ ಬೆಳಗ್ಗೆ 12.50ಕ್ಕೆ ಕುಂದಾಪುರ, ಸಂಜೆ 3.30ಕ್ಕೆ ಮಂಗಳೂರು ತಲುಪಲಿದೆ

    ಬಹುಬೇಡಿಕೆಯ ಮಂಗಳೂರು-ಮುಂಬಯಿ ಸಿಎಸ್‌ಟಿ ಎಕ್ಸ್‌ಪ್ರೆಸ್ ರೈಲು ಕುಂದಾಪುರದಲ್ಲಿ ನಿಲುಗಡೆಯಾಗುತ್ತಿರುವುದಕ್ಕೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹರ್ಷ ವ್ಯಕ್ತಪಡಿಸಿದೆ. ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರ ನಿರಂತರ ಪ್ರಯತ್ನದ ಫಲವಾಗಿ ಕುಂದಾಪುರದ ರೈಲ್ವೆ ಪ್ರಯಾಣಿಕರ ಬೇಡಿಕೆ ಈಡೇರಿದೆ.

ಅದ್ದೂರಿ ಸ್ವಾಗತಕ್ಕೆ ಸಿದ್ಧತೆ:  ಸಿಎಸ್‌ಟಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ದೊರೆತಿರುವ ಹಿನ್ನೆಲೆಯಲ್ಲಿ ಪ್ರಥಮ ನಿಲುಗಡೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕೇಂದ್ರ ರೈಲ್ವೆ ಸಚಿವರ ವಿಶೇಷಾಧಿಕಾರಿ ಬಿ.ಎನ್. ಶೆಟ್ಟಿ ಸೇರಿದಂತೆ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕರು ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com