ಮೊಬೈಲ್‌ನಲ್ಲಿ ದಸರಾ ಮಾಹಿತಿ

ಮೈಸೂರು:  ಮೈಸೂರು ದಸರಾ ಬಗ್ಗೆ ನಿಮಗೆ ಮಾಹಿತಿ ಸಿಗುತ್ತಿಲ್ಲವೇ, ನಿಮ್ಮ ಬಳಿ ಸ್ಮಾರ್ಟ್‌ ಫೋನ್‌ ಇದ್ದರೆ ಸಾಕು. ದಸರೆಯ ಎಲ್ಲ ಮಾಹಿತಿ ಬೆರಳು ತುದಿಯಲ್ಲಿ ಸಿಗುವ ವ್ಯವಸ್ಥೆಯೊಂದನ್ನು ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲಾಡಳಿತ ಅಳವಡಿಸಿದೆ.

ಸ್ಥಳೀಯರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ದಸರಾ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಮೊಬೈಲ್‌ ವೆಬ್‌ ಆ್ಯಪ್ಸ್ ಮತ್ತು ಆ್ಯಂಡ್ರಾ¿…x ಆ್ಯಪ್ಸ್ ಅಭಿವೃದ್ಧಿಪಡಿಸಿದೆ. ಮೊಬೈಲ್‌ ವೆಬ್‌ ಆ್ಯಪ್ಸ್ ಎಲ್ಲ ಆ್ಯಂಡ್ರಾ¿…x, ಐಒಎಸ್‌, ವಿಂಡೋಸ್‌, ಬ್ಲಾಕ್‌ ಬೆರಿ ಮತ್ತು ಸಿಂಬಿಯನ್‌ ಮಾದರಿಯ ಎಲ್ಲಾ ಮೊಬೈಲ್‌ನಲ್ಲೂ ಕೆಲಸ ಮಾಡುತ್ತದೆ. www.mysoredasara.gov.in/mobile ಎಂದು ಮೊಬೈಲ್‌ ಬ್ರೋಸರ್‌ನಲ್ಲಿ ಟೈಪ್‌ ಮಾಡಿ ಸರ್ಚ್‌ ಮಾಡಿದ ಅದರ ಬುಕ್‌ಮಾರ್ಕ್‌ ಸೇವ್‌ ಮಾಡಿಕೊಳ್ಳಬಹುದಾಗಿದೆ. ಆ್ಯಂಡ್ರಾ¿…x ಆ್ಯಪ್ಸ್ ಮೂಲಕ ನೀವು ಆಫ್ ಲೈನ್‌ ಇದ್ದಾಗಲೂ ದಸರೆ ಮಾಹಿತಿ ಮತ್ತು ಪ್ರಮುಖ ಸಂಪರ್ಕ ವಿವರ ಪಡೆದು ಕೊಳ್ಳಬಹುದಾಗಿದೆ.

ಜತೆಗೆ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕ ಸಿಗದಿರುವ ಸಾಧ್ಯತೆ ಇರುವ ವೇಳೆ ಪ್ರವಾಸಿಗರಿಗೆ ಈ ಆ್ಯಪ್ಸ್ ಸಹಕಾರಿಯಾಗಲಿದೆ. ಆ್ಯಂಡ್ರಾಯ್‌j ಮೊಬೈಲ್‌ ಹೊಂದಿರುವವರು ಗೂಗಲ್‌ ಪ್ಲೇನಲ್ಲಿ ಮೈಸೂರು ದಸರಾ ಎಂದು ಟೈಪ್‌ ಮಾಡಿ ಈ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಿ ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಇದರಿಂದ ದಸರಾ ಮಾಹಿತಿ ಪಡೆಯಲು ಕಂಪ್ಯೂಟರ್‌ ಮೊರೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ. ನೀವು ಚಲಿಸುತ್ತಿರುವಾಗ ಇಂಟರ್‌ನೆಟ್‌ ಸೌಲಭ್ಯವೊಂದಿದ್ದರೆ ನಿಮ್ಮ ಬಳಿ ಇರುವ ಸ್ಮಾರ್ಟ್‌ ಫೋನ್‌ನಲ್ಲೇ ಈ ದಸರಾ ಅಪ್ಲಿಕೇಶನ್‌ ಅನ್ನು ಉಪಯೋಗಿಸಬಹುದಾಗಿದೆ.

ಈಗಾಗಲೇ ಮೈಸೂರು ದಸರಾ ವೆಬ್‌ಸೈಟ್‌ ತಿತಿತಿ.ಟಥಿsಡಿಜಜಚಿಚಿಡಿಚಿ.Ãsñ.ಟಿ ರೂಪಿಸಿದ್ದು, ಇದರಲ್ಲಿ ದಸರಾ, ಮೈಸೂರು ಪರಂಪರೆ ಅರಿತು ಕೊಳ್ಳಬಹುದಾಗಿದೆ. ನಾಡಹಬ್ಬದಲ್ಲಿಯ ಗಜಪಯಣದಿಂದ ಚಾಮುಂಡೇಶ್ವರಿ ಪೂಜೆ, ಜಂಬೂಸವಾರಿ, ಪಂಜಿನ ಕವಾಯಿತು ಕಾರ್ಯಕ್ರಮಗಳ ಮಾಹಿತಿ, ಮೈಸೂರಿನ ಪ್ರವಾಸಿ ತಾಣಗಳ ಮಾಹಿತಿ ಲಭ್ಯವಿದೆ. ಕನ್ನಡ, ಇಂಗ್ಲಿಷ್‌, ಹಿಂದಿ ಸಹಿತ 60 ಭಾಷೆಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಕಳೆದ ಬಾರಿ ನಡೆದ ದಸರಾ ಕಾರ್ಯಕ್ರಮಗಳ ಚಿತ್ರಗಳು, ಈ ಬಾರಿಯ ಗಜಪಯಣದ ಚಿತ್ರಗಳು, ನಗರದಲ್ಲಿರುವ ಪಾರಂಪರಿಕ ಕಟ್ಟಡಗಳು, ರಾಜರ ಕಾಲದ ದಸರಾ ಆಚರಣೆಯ ವಿಡಿಯೊ ತುಣುಕುಗಳು, ಈ ಬಾರಿಯ ದಸರಾ ಕಾರ್ಯಕ್ರಮಗಳ ಪಟ್ಟಿ, ಸಮಿತಿಗಳು, ಜಿಲ್ಲೆಯ ಸುತ್ತಮುತ್ತಲಿರುವ 50ಕ್ಕೂ ಹೆಚ್ಚಿನ ಪ್ರವಾಸಿ ತಾಣಗಳು ಹಾಗೂ ಅವುಗಳ ವೆಬ್‌ಸೈಟ್‌ಗಳು, ಪಾರ್ಕಿಂಗ್‌ ಸ್ಥಳ, ನಗರದಲ್ಲಿರುವ ಪ್ರಮುಖ ಸ್ಥಳಗಳು ಹಾಗೂ ರಸ್ತೆಗಳ ಬಗ್ಗೆ ಮಾಹಿತಿ, ಹೋಟೆಲ್‌ಗ‌ಳು, ಪತ್ರಿಕೆಗಳಲ್ಲಿ ಬಂದ ದಸರಾ ಸಂಬಂಧಿಸಿದ ಸುದ್ದಿಗಳು, ನಾನಾ ಇಲಾಖೆ ಫೋನ್‌ ನಂಬರ್‌, ದಸರಾ ಸಮಿತಿಗಳ ಫೋನ್‌ ನಂಬರ್‌ಗಳು ಸೇರಿದಂತೆ ಎಲ್ಲ ಮಾಹಿತಿ ನಿಮಗೆ ಲಭ್ಯವಾಗಲಿದ್ದು, ಇದೀಗ ನಿಮ್ಮ ಮೊಬೈಲ್‌ನಲ್ಲೂ ದಸರಾ ಮಾಹಿತಿ ಬೆರಳ ತುದಿಯಲ್ಲಿ ದೊರೆಯಲಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com