ಬಿಲ್ವ ವೃಕ್ಷ ಆಂದೋಲನ

ಕೋಟೇಶ್ವರ: ಶಾಲಾ ಪರಿಸರ ಹಚ್ಚ ಹಸಿರಿನಿಂದ ಕಂಗೊಳಿಸಿದರೇ ವಿದ್ಯಾರ್ಜನೆಗೆ ಬಹಳ ಅನುಕೂಲವಾಗುತ್ತದೆ ಆದುದರಿಂದ ನಮ್ಮ ಮನೆ, ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಟ್ಟು, ಪೋಷಿಸಿ ಹಸಿರುಮಯವಾಗಿಸ ಬೇಕು ಎಂದು ಬಿಲ್ವ ವೃಕ್ಷ ಆಂದೋಲನದ ಸಂಚಾಲಕ ಎನ್. ಮೋಹನ್ ಆಚಾರ್ಯ ಕೋಟೇಶ್ವರ ಹೇಳಿದರು.
ಅವರು ಬಿಲ್ವ ವೃಕ್ಷ ಆಂದೋಲನದ ಅಂಗವಾಗಿ ಕೋಟೇಶ್ವರದ ಸ.ಪ.ಪೂ.ಕಾಲೇಜಿನ ಪ್ರಗತಿ ಇಕೋ ಕ್ಲಬ್, ಸೈನ್ಸ್ ಹೆಲ್ತ್ ಕ್ಲಬ್ ಆಶ್ರಯದಲ್ಲಿ ಬಿಲ್ವ ವೃಕ್ಷದ ಮಹತ್ವ ಕುರಿತು ಮಾತನಾಡಿದರು. 
ಇದೇ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಭಾಕರ ಮಿತ್ಯಾಂತ ಶಾಲಾ ವಠಾರದಲ್ಲಿ ಬಿಲ್ವ ಸಸಿಯನ್ನು ನೆಟ್ಟು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. 
 ಮುಖ್ಯ ಅತಿಥಿಯಾಗಿ ಹಸಿರು ಭಾರತ ಆಂದೋಲನ ವಿಶ್ವಸ್ಥ ಸಂತೋಷ ಕೋಣಿ ಉಪಸ್ಥಿತರಿದ್ಧರು. ಕುಮಾರಿ ಅಮೃತಾ ಕಾರ್ಯಕ್ರಮ ನಿರ್ವಹಿಸಿದರು, ನಿಶ್ಚಿತ್ ಶೆಟ್ಟಿ ಸ್ವಾಗತಿಸಿದರು,  ಕುಮಾರಿ ನಿಧಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com