ಹಿರಿಯರ ಸಾಧನೆಯ ದಾಖಲಾತಿ ಅಗತ್ಯ:

ಶಿರೂರು: ಹಿರಿಯರ ಸಾಧನೆಗಳ ಕುರಿತ ಮಾತು ಅಲ್ಪಾಯು. ಆದರೆ ಬರಹ ಅವುಗಳನ್ನು ಮುಂದಿನ ತಲೆಮಾರುಗಳಿಗೆ ಕೊಂಡೊಯ್ಯುತ್ತದೆ. ಆದ್ದರಿಂದ ಅವುಗಳ ದಾಖಲೀಕರಣ ನಡೆಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
      ಶಿರೂರಿನ ಮೇಲ್ಪಂಕ್ತಿಯ ಮಧ್ಯಮಾ ವತಿ ಗ್ರಾಮೀಣ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ಗುರುವಾರ ನಡೆದ ಭಾಗವತ ಶಂಕರನಾರಾಯಣ ಶ್ಯಾನು ಭೋಗ್ ಪ್ರಥಮ ಪುಣ್ಯ ಸ್ಮರಣೆ ಸಮಾ ರಂಭದಲ್ಲಿ ಅವರು `ಮಧ್ಯಮಾವತಿ' ಸಂಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
      ತಮ್ಮ ಸಾಧನೆಗಳ ಮೂಲಕ ಊರಿಗೆ ಹೆಸರು ತಂದವರ ಸ್ಮರಣೆ ಮಾಡುವುದು ಅಲ್ಲಿನ ಜನರ ಕರ್ತವ್ಯ ಎಂದು ಹೇಳಿದರು.
ಹೊನ್ನಾವರ ಕವಲಕ್ಕಿಯ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಜಿ.ವಿ.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿ ಕವಾಗಿ ಮಾತನಾಡಿದರು.
     ಉಪ್ಪಿನ ಕುದ್ರು ಯಕ್ಷಗಾನ ಗೊಂಬೆಯಾಟ ಮಂಡಳಿಯ ಸಂಚಾಲಕ ಯು. ಭಾಸ್ಕರ ಕೊಗ್ಗ ಕಾಮತ್, ನಿವೃತ್ತ ಉಪನ್ಯಾಸಕ ಪಿ.ಶೇಷಪ್ಪಯ್ಯ  ಸಂಸ್ಮರಣ ಭಾಷಣ ಮಾಡಿದರು.
       ಸಮಾರಂಭದಲ್ಲಿ ಮದ್ದಳೆಗಾರ ಮಹಾಬಲೇಶ್ವರ ಶೇಟ್ ಅವರಿಗೆ `ಭಾಗವತ ಶಂಕರನಾರಾಯಣ ಶ್ಯಾನು ಭೋಗ್ ಕಲಾಪ್ರಶಸ್ತಿ' ಪ್ರದಾನ ಮಾಡಲಾಯಿತು. ಶಿಕ್ಷಕ ದಿನದ ಹಿನ್ನೆಲೆಯಲ್ಲಿ ಪಿ.ಶೇಷಪ್ಪಯ್ಯ ಅವರನ್ನು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಗೌರವಿಸಲಾಯಿತು.
     ಪಾರ್ವತಿ ಶಂಕರನಾರಾಯಣ ಶ್ಯಾನುಭೋಗ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಗುಡ್ಗೆ ವಂದಿಸಿದರು. ಕೆ. ವಿ. ಹೆಗ್ಡೆ ನಿರೂಪಿಸಿದರು. `ಪಂಚವಟಿ' ಪ್ರಸಂಗದ ತಾಳಮದ್ದಳೆ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com