ಮೀನುಗಾರಿಕೆ ಲೋಡರ್ಸ್‌ ಮುಷ್ಕರ ವಾಪಸ್

ಗಂಗೊಳ್ಳಿ : ವೇತನ ಪರಿಷ್ಕರಣೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆ ಲೋಡರ್ಸ್‌ ನಡೆಸುತ್ತಿದ್ದ ಮುಷ್ಕರ ಭಾನುವಾರ ಅಂತ್ಯಗೊಂಡಿದೆ. ಈ ಮೀನುಗಾರಿಕೆ ಋತುವಿನಲ್ಲಿ 14:15ರ ಅನುಪಾತದಲ್ಲಿ ಲೋಡರ್ಸ್‌ಗಳ ವೇತನವನ್ನು ಪರಿಷ್ಕರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದ ಲೋಡರ್ಸ್‌ಗಳು ಇಂದು ಅನಿವಾರ್ಯವಾಗಿ ಮುಷ್ಕರವನ್ನು ವಾಪಸ್ ಪಡೆದುಕೊಂಡಿದ್ದಾರೆ. 
     ಅಸಂಘಟಿತ ಕಾರ್ಮಿಕರಾಗಿರುವ ಲೋಡರ್ಸ್‌ಗಳಿಗೆ ಯಾವುದೇ ಕಾನೂನಿನ ಭದ್ರತೆ ಇರಲಿಲ್ಲ. ಪ್ರತಿದಿನದ ವೇತನದಿಂದಲೇ ದಿನ ಸಾಗಿಸುವ ಲೋಡರ್ಸ್‌ಗಳು ಕಳೆದ ಮೂರ್ನಾಲ್ಕು ದಿನಗಳಿಂದ ಯಾವುದೇ ವೇತನ ದೊರೆಯದಿರುವುದಿಂದ ಕಂಗಾಲಾಗಿದ್ದರು. ಈ ಮಧ್ಯೆ ಮೀನು ಪಾರ್ಟಿಯವರು ಹೊರಗಿನ ಜನರನ್ನು ಗಂಗೊಳ್ಳಿಗೆ ಕರೆಯಿಸಿಕೊಂಡು ಮೀನು ಬಾಕ್ಸ್‌ಗಳನ್ನು ಲಾರಿಗಳಲ್ಲಿ ತುಂಬಿಸಿಕೊಳ್ಳಲು ಆರಂಭಿಸಿದ್ದರು. ಅಲ್ಲದೆ ಲೋಡರ್ಸ್‌ಗಳಿಗೆ ಪ್ರತಿ ಬಾಕ್ಸ್‌ಗೆ 14 ರೂ.ನಂತೆ ನೀಡುವ ಭರವಸೆ ನೀಡಿದ್ದರು. 
     ಈ ಎಲ್ಲ ಕಾರಣಗಳಿಂದ ಮುಷ್ಕರವನ್ನು ಕೈಬಿಡಲು ಲೋಡರ್ಸ್‌ಗಳು ಚಿಂತನೆ ನಡೆಸಿ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರ ಸಮ್ಮುಖದಲ್ಲಿ ನಡೆದ ಮಾತುಕತೆ ವೇಳೆ ಪ್ರತಿ ಬಾಕ್ಸ್‌ಗೆ 14 ರೂ.ನಂತೆ ಪಡೆದುಕೊಂಡು ಕೆಲಸಕ್ಕೆ ಹಾಜರಾಗಲು ಹಾಗೂ ಅನಿವಾರ್ಯವಾಗಿ ಮುಷ್ಕರವನ್ನು ವಾಪಸ್ ಪಡೆದುಕೊಳ್ಳಲು ತೀರ್ಮಾನಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com