ಮೋಹನ್ ಆಳ್ವಗೆ ಕಾರಂತರ ಹುಟ್ಟೂರು ಪ್ರಶಸ್ತಿ

ಉಡುಪಿ: ಇಲ್ಲಿನ ಕೋಟತಟ್ಟು ಗ್ರಾಪಂ ವತಿಯಿಂದ ನೀಡಲಾಗುವ ಡಾ. ಕಾರಂತರ ಹುಟ್ಟೂರು ಪ್ರಶಸ್ತಿ- 2013ಕ್ಕೆ ನಾಡಿನ ಖ್ಯಾತ ಶಿಕ್ಷಣ ತಜ್ಞ,     ಸಾಂಸ್ಕೃತಿಕ     ಸಂಘಟಕ,     ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಅವರನ್ನು ಆರಿಸಲಾಗಿದೆ.
ಪ್ರಶಸ್ತಿ ಪ್ರತಿಷ್ಠಾನ ಅಧ್ಯಕ್ಷ ಆನಂದ ಸಿ. ಕುಂದರ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಪ್ರಕಟಿಸಿ, ತನ್ನೂರಲ್ಲಿ ಹುಟ್ಟಿದ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ನೀಡುವ ದೇಶದ ಏಕೈಕ ಗ್ರಾಪಂ ಕೋಟತಟ್ಟು. ಇಲ್ಲಿ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಡಾ. ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ 2005ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com