ನಾರಾಯಣಗುರು ವಿಚಾರ ಪಠ್ಯವಾಗಿಸಲು ಚಿಂತನೆ: ಸಚಿವ ಸೊರಕೆ

ಬ್ರಹ್ಮಾವರ: ನಾರಾಯಣಗುರು ಬದುಕು, ಆದರ್ಶ, ತಣ್ತೀ ಮತ್ತು ವಿಚಾರಗಳನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಕುರಿತು ಸರಕಾರ ಚಿಂತನೆ ನಡೆಸಲಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ಅವರು  ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಾವರ ನಾರಾಯಣಗುರು ಸಭಾಭವನದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿ ಅವರ 159ನೇ ಜನ್ಮದಿನಾಚರಣೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ನಾರಾಯಣಗುರು ಅವರ ಶ್ರೇಷ್ಠ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಎಲ್ಲರಿಗೂ ಅನ್ವಯವಾಗುವಂತಹುದು. ಕೋಟಿ-ಚೆನ್ನಯರು ಹುಟ್ಟಿದ ಪಡುಮಲೆಯ ಎಡೆ¾àರು ಗರೋಡಿಯ ಅಭಿವೃದ್ಧಿಗೆ 5 ಕೋ. ರೂ., ನಾರಾಯಣಗುರು ಅಧ್ಯಯನ ಪೀಠಕ್ಕೆ 2 ಕೋ. ರೂ.ಗಳನ್ನು ಸರಕಾರ ಒದಗಿಸುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭ ಸಚಿವರನ್ನು ಸಮ್ಮಾನಿಸಲಾಯಿತು. ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಬ್ರಹ್ಮಾವರ ಆರಕ್ಷಕ ಠಾಣೆಯ ಸಹಾಯಕ ಉಪನಿರೀಕ್ಷಕ ಬಾಲಕೃಷ್ಣ ಡಿ. ಪೂಜಾರಿ, ತಾ.ಪಂ. ಸದಸ್ಯರಾದ ವಿಟuಲ ಪೂಜಾರಿ ಮತ್ತು ಉಷಾ ಪೂಜಾರ್ತಿ, ಉದ್ಯಮಿಗಳಾದ ಸಂತೋಷ್‌ ಕೋಟ್ಯಾನ್‌ ಉಗ್ಗೆಲ್‌ಬೆಟ್ಟು, ಸುಭಾಷ್‌ ಪೂಜಾರಿ ಮತ್ತು ಶೀನ ಪೂಜಾರಿ, ಬ್ರಹ್ಮಾವರ ಸಹಾಯಕ ಉಪನಿರೀಕ್ಷಕ ಶೀನ ಬಿಲ್ಲವ, ಶಿಕ್ಷಕ ಮೋಹನ ಪೂಜಾರಿ, ಕೋಶಾಧಿಕಾರಿ ರವೀಂದ್ರ ಪೂಜಾರಿ, ಹೇರೂರು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ, ಶಿರಿಯಾರ ಬಿಲ್ಲವ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಉಪಾಧ್ಯಕ್ಷ ರಾಘವ ಪೂಜಾರಿ, ಎಚ್‌. ಅಶೋಕ ಪೂಜಾರಿ ಹಾರಾಡಿ ಮೊದಲಾದವರು ಉಪಸ್ಥಿತರಿದ್ದರು.

ದಿನಕರ ಹೇರೂರು ಸ್ವಾಗತಿಸಿದರು. ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ನರಸಿಂಹ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶೇಖರ ಪೂಜಾರಿ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com