ನಾಮಾ ಸಂಕೀರ್ತನೆ 2013 ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ

ಕುಂದಾಪುರ: ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರ ಆರ್ಶೀವಾದದೊಂದಿಗೆ ಹೂವಿನಕೆರೆ ಕಾಮಧೇನು ಗೋ ಸಂರಕ್ಷಣಾ ಕೇಂದ್ರ, ಗೋಪಾಡಿ ಕಾಮಧೇನು ಗೋ ಸೇವಾ ಸಮಿತಿ ಇವರ ಆಶ್ರಯದಲ್ಲಿ ಗೋಪೂಜೆಯ ಪ್ರಯುಕ್ತ ನಾಮಾ ಸಂಕೀರ್ತನೆ 2013 ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯನ್ನು ಸೆ.27ರಂದು ಬೆಳ್ಳಿಗ್ಗೆ 9ಕ್ಕೆ ಹೂವಿನಕೆರೆ ಕಾಮಧೇನು ಗೋ ಸಂರಕ್ಷಣಾ ಕೇಂದ್ರದಲ್ಲಿ ಜರುಗಲಿದೆ. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ನೀಲಾವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಸುಪ್ರಸಾದ ಶೆಟ್ಟಿ ಶುಭಶಂಸನೆಗೈಲಿದ್ದಾರೆ. ಉಡುಪಿ ಪರ್ಯಾಯ ಸೋದೆ ವಾದಿರಾಜ ಮಠ ದಿವಾನ ಶ್ರೀನಿವಾಸ ತಂತ್ರಿ, ತಾಲೂಕು ಪಂಚಾಯಿತಿ ಸದಸ್ಯ ದೀಪಕ್ ಶೆಟ್ಟಿ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಭಜನಾ ಸ್ಪರ್ಧೇ 3 ವಿಭಾಗವಾಗಿ ನಡೆಯಲಿದ್ದು ಮಕ್ಕಳಿಗೆ ಕುಣಿತ ಭಜನೆ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕುಣಿತ ಭಜನೆಗಳಿದ್ದು ಗೆದ್ದ ತಂಡಕ್ಕೆ ಪಾರಿತೋಷಕ, ನಗದು ಬಹುಮಾನಗಳಿವೆ.ಸಮರೋಪ ಸಮಾರಂಭದ ಅಧ್ಯಕ್ಷತೆ ಕಾಳಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ ವಹಿಸಿಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತುಮಕೂರು ಉದ್ಯಮಿ ಶ್ರೀನಿವಾಸ ಹತ್ವಾರ, ಗೋಪಾಡಿ ಕಾಂತೇಶ್ವರ ದೇವಸ್ಥಾನ ಧರ್ಮದರ್ಶಿ ಜಿ.ಎಮ್. ನರಸಿಂಹಮೂರ್ತಿ ಉಪಾಧ್ಯ, ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ ಆಗಮಿಸಿಲಿದ್ದಾರೆ. ಸ್ಪರ್ಧೇಗೆ ಭಾಗವಹಿಸುವ ತಂಡಗಳು ಸೆ.20 ಒಳಗೆ ಹೆಸರು ನೊಂದಯಿಸಬೇಕು. ಹೆಚ್ಚಿನ ವಿಷಯಗಳಿಗೆ 9886694471, 9844255717, 9844723087 ಸಂಪರ್ಕಿಸಬೇಕೆಂದು ಸಂಸ್ಥೆಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com