ಭಂಡಾರ್ಕಾರ್ ಕಾಲೇಜು ಸಂಸ್ಥಾಪಕರ ಸಂಸ್ಮರಣ ದಿನಾಚರಣೆ: ಆಳ್ವಾಸ್‌ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಕುಂದಾಪುರ : ಇಲ್ಲಿನ ಭಂಡಾರ್ಕಾರ್ ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣ ದಿನಾಚರಣೆ ಅಂಗವಾಗಿ ನಡೆದ ಅಂತರ್‌ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಮೂಡಬಿದ್ರೆಯ ಆಳ್ವಾಸ್‌ ಕಾಲೇಜು ಅತಿ ಹೆಚ್ಚು ಅಂಕ ಪಡೆದು ಸಮಗ್ರ ಪ್ರಶಸ್ತಿಯೊಂದಿಗೆ ಡಾ| ಎ.ಎಸ್‌. ಭಂಡಾರ್ಕಾರ್‌ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ.

ಏಳು ವಿಭಾಗದಲ್ಲಿ ನಡೆದ ಸಂಗೀತ ಸ್ಪರ್ಧೆಯ ಫಲಿತಾಂಶ: ಶಾಸ್ತ್ರೀಯ ಹಾಡುಗಾರಿಕೆ: 1. ಘನಶ್ಯಾಮ ಭಟ್‌ (ಆಳ್ವಾಸ್‌ ಕಾಲೇಜು (ಆಳ್ವಾಸ್‌), 2. ಶರಧಿ ಪಾಟೀಲ (ಪಿಪಿಸಿ ಉಡುಪಿ) 3. ಚಿನ್ಮಯಿ (ಆರ್‌.ಎನ್‌. ಶೆಟ್ಟಿ ಕುಂದಾಪುರ).

ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆ: 1. ವಿಜೇತಾ ಎಂ. (ಆಳ್ವಾಸ್‌), 2. ದೀಪಕ್‌ ಹೆಬ್ಟಾರ್‌ (ಭಂಡಾರ್ಕಾರ್ ), 3. ಮಧು ಭಟ್‌ (ಪಿಪಿಸಿ).

ದಾಸಕೀರ್ತನೆ ಸ್ಪರ್ಧೆ: 1. ಘನಶ್ಯಾಮ ಭಟ್‌ (ಆಳ್ವಾಸ್‌), 2. ರಕ್ಷತಾ ನಾಯಕ್‌ (ಎಂ.ಜಿ.ಎಂ.), 3. ರಜನಿ ಆರ್‌.ಸಿ. (ಬೆಸೆಂಟ್‌ ).

ಕನ್ನಡ ಭಾವಗೀತೆ ಸ್ಪರ್ಧೆ: 1. ಶರಧಿ ಪಾಟೀಲ (ಪಿಪಿಸಿ) ಮತ್ತು ಮೇಘವಿ ಜೆ. (ಆಳ್ವಾಸ್‌), 2. ಶ್ರೀರûಾ (ಡಾ| ಜಿ. ಶಂಕರ್‌ ಸರಕಾರಿ ಮಹಿಳಾ ಕಾಲೇಜು, ಉಡುಪಿ), 3. ರಜನಿ ಆರ್‌.ಸಿ. (ಬೆಸೆಂಟ್‌ ಮಹಿಳಾ ಕಾಲೇಜು ಮಂಗಳೂರು).

ಕನ್ನಡ ಜಾನಪದಗೀತೆ ಸ್ಪರ್ಧೆ: 1. ಸ್ವಪ್ನಶ್ರೀ ಅಡಿಗ (ಆಳ್ವಾಸ್‌), 2. ಅಕ್ಷತಾ ಪಿ. (ಸರಕಾರಿ ಪ್ರ.ದರ್ಜೆ ಕಾಲೇಜು ಬಾರಕೂರು), 3. ಮಧುಶ್ರೀ (ಭಂಡಾರ್ಕಾರ್ ).

ಚಿತ್ರಗೀತೆ ಸ್ಪರ್ಧೆ: 1. ಗಣೇಶ್‌ (ಆಳ್ವಾಸ್‌ ), 2. ರಕ್ಷತಾ ನಾಯಕ್‌ (ಎಂ.ಜಿ.ಎಂ.) 3. ಅದಿತಿ (ಆರ್‌.ಎನ್‌. ಶೆಟ್ಟಿ ಪ.ಪೂ. ಕಾಲೇಜು ಕುಂದಾಪುರ).

ಸಮೂಹಗಾನ ಸ್ಪರ್ಧೆ: 1. ಆಳ್ವಾಸ್‌ ಕಾಲೇಜು, ಮೂಡಬಿದ್ರೆ, 2. ಎಂ.ಜಿ.ಎಂ. ಕಾಲೇಜು, ಉಡುಪಿ, 3. ಭಂಡಾರ್ಕಾರ್ ಕಾಲೇಜು, ಕುಂದಾಪುರ ಪಡೆದುಕೊಂಡಿತು.

ಸಂಗೀತ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಪಡೆದ ತಂಡಕ್ಕೆ ಕೊಡಮಾಡುವ ಡಾ| ಎ.ಎಸ್‌. ಭಂಡಾರ್ಕಾರ್‌ ಪರ್ಯಾಯ ಫಲಕವನ್ನು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಡಿ. 5ರಂದು ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ವಿತರಿಸಲಾಗುವುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com