ಸಹಜತೆ,ಸರಳತೆಯಿದ್ದರೆ ಜೀವನ ಆನಂದ: ಚಂದ್ರಪ್ರಭಾ .ಆರ್ ಹೆಗ್ಡೆ

ಕುಂದಾಪುರ: ಆತ್ಮದ ಉನ್ನತಿಗೆ ತೊಡಕಾಗಿರುವ ವಿಚಾರಗಳನ್ನು ಯೋಗದ ಮೂಲಕ ತಡೆಗಟ್ಟಿ ಶ್ರದ್ಧೆ, ನಿಷ್ಠೆ ಸಾಕ್ಷಾತ್ಕರಿಸಿ ಸಹಜತೆ, ಸರಳತೆಯಿದ್ದರೆ ಜೀವನದಲ್ಲಿ ಸದಾ ಆನಂದ ಪಡೆಯಬಹುದು ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲೆ ಚಂದ್ರ ಪ್ರಭಾ .ಆರ್ ಹೆಗ್ಡೆ ಹೇಳಿದರು.
ಅವರು ಹುಣ್ಸೆಮಕ್ಕಿಯಲ್ಲಿ ಆರೋಗ್ಯ ಮತ್ತು ಸಾಂಸ್ಕøತಿಕ ವಿಕಾಸ ಕೇಂದ್ರ ಬ್ರಹ್ಮಾವರ, ಜ್ಞಾನ ವಿಕಾಸ ಯೋಗ ಕುಂದಾಪುರ, ಪ್ರಗತಿ ಯುವಕ ಮಂಡಲ ಹುಣ್ಸೆಮಕ್ಕಿ, ಶಾಲಾಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜ್ಞಾನ ವಿಕಾಸ ಯೋಗ ಶಿಬಿರಾರ್ಥಿಗಳಿಂದ ಫ್ಯಾಮಿಲಿ ಡೇ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
 ಆತ್ಮ ಸ್ವಾತಂತ್ರ್ಯ ಅನುಭವಿಸುವ  ಜೀವನ ನಮ್ಮದಾಗಿರಿಸಿಕೊಂಡು ಎಲ್ಲರ ಕಷ್ಟ-ಸುಖಗಳಿಗೆ ಭಾಗಿಯಾಗಿ ಸದೃಢ ಸಮಾಜ ನಿರ್ಮಿಸಿದಾಗ ಯೋಗ ಜೀವನ ಸಾರ್ಥಕ ಎಂದು  ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು. ಹಿರಿಯ ಯೋಗ ಸಾಧಕ ವಕೀಲ ಆವರ್ಸೆ ರತ್ನಾಕರ್ ಶೆಟ್ಟಿ  ಸಭಾಧ್ಯಕ್ಷತೆ ವಹಿಸಿದ್ದರು.
ಜ್ಞಾನ ವಿಕಾಸ ಯೋಗ ಮುಖ್ಯ ತರಬೇತುದಾರೆ ಶ್ರೀಮತಿ ಮುಕ್ತಾ ಮಾತಾಜಿ ಆರ್ಶೀವಚಿಸಿ,  ದೇಹಕ್ಕೆ ವಿದ್ಯೆ ನೀಡುವುದರ ಜೊತೆಗೆ ಮನಸ್ಸಿಗೆ ವಿದ್ಯೆ ನೀಡಿದಾಗ ಕೌಟುಂಬಿಕ ಸಂಬಂಧ, ಮಾನವೀಯ ಮೌಲ್ಯ, ಉತ್ತಮ ವ್ಯಕ್ತಿತ್ವ ಬೆಳೆಯುದರೊಂದಿಗೆ ಸಾರ್ಥಕ ಜೀವನ, ಪೃಕೃತಿ ಸಹಜ ಬದುಕು ನಮ್ಮದಾಗುತ್ತದೆ ಎಂದರು. ಯೋಗ ತರಬೇತಿ ಪಡೆದ ಶಿಬಿರಾರ್ಥಿಗಳು ಹಾಗೂ ಹಿರಿಯ ಸಾಧಕರಾದ ಬಾಬಣ್ಣ ಪೂಜಾರಿ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ರತ್ನಾಕರ್ ಶೆಟ್ಟಿ, ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ, ಗಣೇಶ್ ಶೆಟ್ಟಿ, ಶ್ರೀನಿವಾಸ ಪ್ರಭು, ಸದಾನಂದ ಶಾನುಭೋಗ್ ಯೋಗದ ಅನುಭವ ಹಂಚಿಕೊಂಡರು. ಹುಣ್ಸೆಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಸುಧಾಕರ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಂದ್ರ ಶೇಖರ್ ಶೆಟ್ಟಿ ಸ್ವಾಗತಿಸಿದರು. ರಾಜ್ ಶೇಖರ್ ಶೆಟ್ಟಿ ನಿರೂಪಿಸಿದರು. ಶಿಕ್ಷಕ ಜಯರಾಮ್ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com