ಅ.14ಕ್ಕೆ ಸ್ವಾಮಿ ವಿವೇಕಾನಂದ ರಥ ಉಡುಪಿ ಜಿಲ್ಲೆಗೆ

ಕುಂದಾಪುರ: ಸ್ವಾಮಿ ವಿವೇಕಾನಂದರ 150ನೆಯ ಜನ್ಮ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿರುವ ರಥಯಾತ್ರೆಯು ಅಕ್ಟೋಬರ 14ರಂದು ಮುರ್ಡೇಶ್ವರದಿಂದ ಹೊರಟು ಶಿರೂರು ಮೂಲಕ ಉಡುಪಿ ಜಿಲ್ಲೆ ಪ್ರವೇಶಿಸುವುದು ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಪ್ರಕಟಿಸಿದರು. ರಥಯಾತ್ರೆಯ ಪೂರ್ವ ಸಿದ್ಧತೆಗಾಗಿ ಬುಧವಾರ ಅವರು ಬೈಂದೂರು ಕ್ಷೇತ್ರದ ಗಂಗೊಳ್ಳಿ, ತ್ರಾಸಿ, ಮರವಂತೆ, ಉಪ್ಪುಂದ, ಬೈಂದೂರು, ಶಿರೂರಿಗೆ ಭೇಟಿ ನೀಡಿ ಅಲ್ಲಿನ ಪ್ರಮುಖರನ್ನು ಹಾಗೂ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಇದನ್ನು ತಿಳಿಸಿದರು.  
     ಸ್ವಾಮಿ ವಿವೇಕಾನಂದರು ಭಾರತೀಯ ಧರ್ಮ ಮತ್ತು ಸಂಸ್ಕøತಿಯ ಪುನರುತ್ಥಾನಕ್ಕೆ ಕಾರಣರಾದವರು. ಭಾರತೀಯರನ್ನು ದೀರ್ಘಕಾಲದ ಮರೆವಿನಿಂದ ಬಡಿದೆಬ್ಬಿಸಿದರು. ಅವರ ಸಂದೇಶವನ್ನು ಎಲ್ಲರಿಗೆ, ಅದರಲ್ಲೂ ಮುಖ್ಯವಾಗಿ ನಮ್ಮ ಯುವಜನರಿಗೆ ತಲಪಿಸುವುದು ಈ ಯಾತ್ರೆಯ ಉದ್ದೇಶ. ರಥಯಾತ್ರೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪರಿಭ್ರಮಣ ನಡೆಸಿದೆ. ಉಡುಪಿ ಜಿಲ್ಲೆಯಲ್ಲಿ ಅದು ಸಾಗುವ ದಾರಿಯಲ್ಲಿ ಜನರು ಸೇರಿ ಸ್ವಾಗತಿಸಬೇಕು 
ಎನ್ನುವುದು ತಮ್ಮ ಆಶಯ ಎಂದು ಅವರು ಹೇಳಿದರು. ಇದಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 
      ಈ ಭೇಟಿಯ ಸಂದರ್ಭದಲ್ಲಿ ಬ್ರಹ್ಮಚಾರಿ ಆತ್ಮಚೈತ್ಯಾನಂದ, ಕೆ. ಪ್ರೇಮಾನಂದ ಶೆಟ್ಟಿ, ಚಂದ್ರಮೋಹನ ಧನ್ಯ ಅವರೊಂದಿಗಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com