ಬಹು ಗ್ರಾಮ ಯೋಜನೆಗೆ 43 ಕೋಟಿ ಅನುದಾನ: ಗೋಪಾಲ ಪೂಜಾರಿ

ಬೈಂದೂರು: ಬೈಂದೂರು ಕ್ಷೇತ್ರದ ಬಹುನಿರೀಕ್ಷಿತ ಬಹುಗ್ರಾಮ ಯೋಜನೆಗೆ 43 ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ನುಡಿದರು. ಅವರು ಬೈಂದೂರು ದರ್ಖಾಸ್ತು ಕಾಲೋನಿ ಆಂಬೇಡ್ಕರ್‌ ಭವನದಲ್ಲಿ ನಡೆದ ಸರ್ವಶಕ್ತಿ ನವೋದಯ ಸ್ವಸಹಾಯ ಸಂಘದ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡುತ್ತ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ವಸತಿ ವ್ಯವಸ್ಥೆಯ ನಿವೇಶನ ಚಿಂತನೆಗೆ ರಾಜ್ಯ ಪಾಲರ ಅನುಮೋದನೆ ದೊರೆತಿಲ್ಲ. ಈಗಾಗಲೇ ಕಾಲೋನಿಗಳ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ 16 ಲಕ್ಷ ಅನುದಾನದ ಕ್ರಿಯಾಯೋಜನೆ ಸಿದ್ದ ಮಾಡಲಾಗಿದೆ. ಅತ್ಯಂತ ವಿಶಾಲ ವ್ಯಾಪ್ತಿಯ ಬೈಂದೂರು ಪುರಸಭೆಯಾಗಿ ಮಾರ್ಪಡಿಸುವ ತಯಾರಿ ನಡೆಯುತ್ತಿದೆ. ಅಂಬೇಡ್ಕರ್‌ ಭವನಕ್ಕೆ ಅನುದಾನ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
     ಈ ಸಂಧರ್ಭದಲ್ಲಿ ಬೈಂದೂರು ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಕೆ.ರಮೇಶ ಗಾಣಿಗ, ತಾ.ಪಂ ಸದಸ್ಯ ರಾಜು ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ರಾಧಾ ಪೂಜಾರಿ, ಗ್ರಾ.ಪಂ ಸದಸ್ಯರಾದ ಗಿರೀಶ್‌ ಬೈಂದೂರು, ಗಣೇಶ ಪೂಜಾರಿ, ಕೃಷ್ಣಯ್ಯ ಶೆಟ್ಟಿ, ಕೃಷ್ಣ ದೇವಾಡಿಗ, ಮಹಾದೇವಿ, ಮಾಜಿ ಪುರಸಭಾಧ್ಯಕ್ಷ ಎಚ್‌.ಸುಬ್ರಾಯ ಶೇರುಗಾರ್‌, ಅಂಬೇಡ್ಕರ್‌ ಸಂಘದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ರಮಾನಂದ, ಸತೀಶ ನಾಡಾ, ನವೋದಯ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಹಾಜರಿದ್ದರು. ದಯಾನಂದ ಪಿ ಸ್ವಾಗತಿಸಿ ಧನ್ಯವಾದಗೈದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com