ರೈತರ ಗ್ರಾಮಸಭೆ- ರೈತನ ಕಣ್ಣಿರಿಗೆ ಕೊನೆಯಿಲ್ಲ: ಅಪ್ಪಣ್ಣ ಹೆಗ್ಡೆ

ಬಸ್ರೂರು: ಅಧಿಕಾರಕ್ಕೆ ಬರುವ ಮೊದಲು ಪ್ರತಿಯೊಂದು ರಾಜಕೀಯ ಪಕ್ಷಗಳು ರೈತರ ಕಣ್ಣೀರು ಒರೆಸುವ ಮಾತು ಆಡುತ್ತವೆ. ಆದರೆ ಅಧಿಕಾರ ಸಿಕ್ಕ ಬಳಿಕ ರೈತರು ಕಣ್ಣೀರು ಸುರಿಸುವಂತೆ ಮಾಡುತ್ತಿರುವುದು ದುರದೃಷ್ಟಕರ. ರೆತರ ಕಣ್ಣೀರಿಗೆ ಕೊನೆ ಮೊದಲಿಲ್ಲ ಎಂಬಂತಾಗಿದೆ ಎಂದು ಮಾಜಿ ಶಾಸಕ, ಹಿರಿಯ ಕೃಷಿಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಬಸ್ರೂರು ನಿವೇದಿತಾ ಪ್ರೌಢಶಾಲೆ ಸಭಾಂಗಣದಲ್ಲಿ ಭಾನುವಾರ ಉಡುಪಿ ಜಿಲ್ಲಾ ರೆತ ಸಂಘ ಹಮ್ಮಿಕೊಂಡ ಬಸ್ರೂರು ಗ್ರಾಮದ ರೈತರ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. 

ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಕರಾವಳಿಯಲ್ಲಿ ರೈತ ಸಂಘಟನೆ ಕ್ಷೀಣವಾಗಿದೆ. ಶಾಸಕ ಕೆ. ಪ್ರತಾಪಚಂದ್ರ ಶೆಟ್ಟಿ ನೇತತ್ವದಲ್ಲಿ ಒಂದು ಅರ್ಥಪೂರ್ಣ ರೆತ ಸಂಘಟನೆ ಕಾರ್ಯಾಚರಿಸುತ್ತಿದ್ದು, ಗ್ರಾಮ ಗ್ರಾಮಗಳಲ್ಲಿಯೂ ರೈತರ ಸಂಕಷ್ಟ ಆಲಿಸುವ ಪ್ರಯತ್ನ ಶ್ಲಾಘನೀಯ. ಪ್ರತಿಯೊಬ್ಬ ರೆತರು ಹೆಗಲು ಕೊಟ್ಟಾಗ ಮಾತ್ರ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಸರಕಾರ ಆನೆ ಇದ್ದ ಹಾಗೆ. ಆನೆ ಎಚ್ಚರಗೊಳ್ಳಬೇಕಾದರೆ ಅಂಕುಶದಿಂದ ಮಾತ್ರ ಸಾಧ್ಯ. ಈ ನೆಲೆಯಲ್ಲಿ ಸಂಘಟನೆ ಕೆಲಸ ಮಾಡಬೇಕಾಗಿದೆ. ರೆತರ ಅನುಕೂಲಕ್ಕಿರುವ ಪ್ರಾಥಮಿಕ ಸಹಕಾರಿ ಸಂಘಗಳ ಮೇಲೆ ನಬಾರ್ಡ್‌ನ ತೂಗುಗತ್ತಿ ತೂಗುತ್ತಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಿಂದ 1.80 ಕೋಟಿ ರೂ. ರೆತರಿಗೆ ಪಾವತಿಯಾಗಬೇಕಾಗಿದೆ ಎಂದರು. 

ರೈತ ಶೀನ ಪೂಜಾರಿ ಮಾತನಾಡಿ, 1997-98ರಲ್ಲಿ ಅಕ್ರಮ- ಸಕ್ರಮದಡಿ ಅರ್ಜಿ ಕೊಟ್ಟವರಿಗೆ ಇನ್ನೂ ಮಂಜೂರಾತಿಯಾಗಿಲ್ಲ. ಸಣ್ಣ ಹಿಡುವಳಿದಾರರ ಕಡೆಗಣನೆ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಸಣ್ಣ ರೆತರಿಗೆ ಗೌರವ ನೀಡುತ್ತಿಲ್ಲ. ವೆಂಟೆಡ್ ಡ್ಯಾಂಗಳು ಮೂಲೆಗುಂಪಾಗಿರುವುದರಿಂದ ಕೃಷಿ ಚಟುವಟಿಕೆಗೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಿಪಡಿಸಿದರು. 

ಉಡುಪಿ ಜಿಲ್ಲಾ ರೆತ ಸಂಘದ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com