ಕರಾವಳಿ ಭಾಗದ ರಸ್ತೆಗಳ ಶೀಘ್ರ ಪುನಶ್ಚೇತನ:ಶಾಸಕ ಕೆ.ಗೋಪಾಲ ಪೂಜಾರಿ

ಬೈಂದೂರು:  ಕ್ಷೇತ್ರದ ಕರಾವಳಿ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲವಾದ ಕಾರಣ ದುರಸ್ಥಿಗೆ ಸಾಧ್ಯವಾಗುತ್ತಿಲ್ಲ. ಶೀಘ್ರವಾಗಿ ಮೀನುಗಾರಿಕಾ ರಸ್ತೆಗಳು ಸೇರಿದಂತೆ ಕರಾವಳಿ ಭಾಗದ ರಸ್ತೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ನುಡಿದರು. ಅವರು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ವಿವಿಧ ಶಾಲೆಗಳ ಅಕ್ಷರ ದಾಸೋಹ ನೂತನ ಕಟ್ಟಡಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತ ಬೈಂದೂರಿನಿಂದ ದೊಂಬೆಯವರೆಗೆ ಪ್ರವಾಸೋದ್ಯಮ ಇಲಾಖೆ ಸರಕಾರದಿಂದ 1ಕೋಟಿ ಅನುದಾನ ಮೀಸಲಿರಿಸಲಾಗಿದೆ. ಹಾಗೂ ಕಾಮಗಾರಿ ಪ್ರಾರಂಭಗೊಳ್ಳಲಿದೆ.

ಕ್ಷೇತ್ರದಲ್ಲಿ ಒಟ್ಟು 98 ಅಕ್ಷರ ದಾಸೋಹ ಅಡುಗೆ ಕೋಣೆಗಳ ನಿರ್ಮಾಣವಾಗಲಿದೆ. ಸರಕಾರ ಶಿಕ್ಷಣದ ಅಭಿವೃದ್ದಿ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಶುಚಿತ್ವ ಹಾಗೂ ಆರೋಗ್ಯಕರ ವಾತಾವರಣದ ನಿರ್ಮಾಣದ ಬಗ್ಗೆ ಶಾಲೆಗಳು ವಿಶೇಷ ಪ್ರಾದಾನ್ಯತೆ ನೀಡಬೇಕು.ಅನ್ನಭಾಗ್ಯ, ಕ್ಷೀರಭಾಗ್ಯದಂತ ಯಶಸ್ವಿ ಯೋಜನೆಗಳು ಜನಸಾಮಾನ್ಯರ ಮೆಚ್ಚುಗೆಗಳಿಸಿ ಯಶಸ್ವಿಯಾಗಿದೆ ಎಂದರು. ಜನತಾ ಪ್ರೌಢಶಾಲೆ ಬೈಂದೂರು, ಮಾದರಿ ಶಾಲೆ ಬೈಂದೂರು, ಸರಕಾರಿ ಹಿ.ಪ್ರಾ.ಶಾಲೆ ದೊಂಬೆ, ಸ.ಪ.ಪೂ ಕಾಲೇಜು ಶಿರೂರು, ಸರಕಾರಿ ಮಾದರಿ ಶಾಲೆ ಶಿರೂರು, ಸ.ಹಿ.ಪ್ರಾ.ಶಾಲೆ ಕೆಸರಕೋಡಿಗಳಲ್ಲಿ ತಲಾ 4.5 ಲಕ್ಷ ಅನುದಾನಗಳ ಕಟ್ಟಡಗಳ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂಧರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ರಾಜು ಪೂಜಾರಿ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯೆ ಶ್ರೀಮತಿ ಮೊಗವೀರ, ಸಾವಿತ್ರಿ ಅಳ್ವೆಗದ್ದೆ, ರಾಮ ಬೈಂದೂರು,ಗ್ರಾ.ಪಂ ಅದ್ಯಕ್ಷರುಗಳಾದ ರಾಧಾ ಪೂಜಾರಿ, ಸುರೇಶ ಬಟ್ವಾಡಿ, ರಾಮು ಮೇಸ್ತ ಹಾಗೂ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com