ಅಸೋಡು: ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭೆ

ಕುಂದಾಪುರ: ಅಸೋಡು 9 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕೋಟೇಶ್ವರ ವ್ಯವಸಾಯ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಮಾರ್ಕೋಡು ಬುದ್ದರಾಜ ಶೆಟ್ಟಿ ವಹಿಸಿದ್ದರು. ಅವರು ಮಾತನಾಡಿ, ಭಾರತೀಯರಲ್ಲಿ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸುವ ಉದ್ಧೇಶದಿಂದ ಬಾಲಗಂಗಾದರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆಯಿಂದ ಜನರನ್ನು ಒಂದೆಡೆ ಸಂಘಟಿಸಿ, ಆ ಮೂಲಕ ಸಮಾಜದಲ್ಲಿ ಮೂಡಿಸಿದ ಸ್ನೇಹಯುತ ಸಹಬಾಳ್ವೆ ಹಳ್ಳಿ ಹಳ್ಳಿಯಲ್ಲಿ ಇಂದಿಗೂ ನೆಲೆಯೂರಿದೆ ಎಂದರು.
      ಬೀಜಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಾಲಚಂದ್ರ ಹೆಬ್ಬಾರ್ ಮಾತನಾಡಿ, ಭಕ್ತಿ, ಭಾವೈಕ್ಯೆತೆಯ ಹಿನ್ನಲೆಯಲ್ಲಿ ಆಚರಿಸುವ ಗಣೇಶನ ಹಬ್ಬ ಯಾವುದೇ ಜಾತಿ-ಮತ ಭೇದವಿಲ್ಲದೆ ನಮ್ಮೆಲ್ಲರನ್ನು ಏಕೀಕರಣಗೊಳಿಸಿ ಸದೃಡ ಸಮಾಜ ನಿರ್ಮಿಸಲು ಸಹಕಾರಿಯಾಗಿದೆ ಎಂದರು.
        ಹೆಮ್ಮಾಡಿ ಜನತಾ ಪ.ಪೂ.ಕಾಲೇಜಿನ ಉಪನ್ಯಾಸಕ ಸುಧಾಕರ ವಕ್ವಾಡಿ, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎಚ್.ಜಿ.ಭಾಸ್ಕರ್ ಶೆಟ್ಟಿ, ಅಸೋಡು ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮ ಶೆಟ್ಟಿಗಾರ್ ಸಭೆಯಲ್ಲಿ ಉಪಸ್ಥಿತರಿದ್ದರು.
     ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ಬಹುಮಾನ ವಿತರಿಸಲಾಯಿತು. ಗೋಪಾಲ ಕೃಷ್ಣ ಪುರಾಣಿಕ ಅವರ ನೇತೃತ್ವದಲ್ಲಿ ಗಣೇಶನಿಗೆ ಪೂಜಾ ವಿಧಿವಿದಾನ ನಡೆಯಿತು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಶ್ರೀಧರ್ ಶೆಟ್ಟಿ, ಆನಂದ ಪೂಜಾರಿ ಬಹುಮಾನ ಪಟ್ಟಿ ವಾಚಿಸಿದರು. ಸಂತೋಷ ಶೇರಿಗಾರ್ ನಿರೂಪಿಸಿದರು. ಸಂದೀಪ ಶೆಟ್ಟಿಗಾರ್ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com