ಅ. 5 - 14: ಮಂಗಳೂರು ದಸರಾ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಒಂದು ಶತಮಾನದ ಹಿಂದೆ ಸ್ಥಾಪಿಸಲ್ಪಟ್ಟ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಂಪ್ರತಿ ಜರಗುವ, ವಿಶ್ವವಿಖ್ಯಾತಿಗೊಂಡಿರುವ ಮಂಗಳೂರು ದಸರಾ - 2013ನ್ನು ಅತ್ಯಂತ ಆಕರ್ಷಣೀಯ ಹಾಗೂ ವೈಭವದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ಮಂಗಳೂರು ದಸರಾ ಮಹೋತ್ಸವ ಅ. 5ರಂದು ಪ್ರಾರಂಭಗೊಂಡು ಅ. 14ರಂದು ಸಮಾಪ್ತಿಗೊಳ್ಳಲಿವೆ. ಅ. 5ರಂದು ಬೆಳಗ್ಗೆ 11.30ಕ್ಕೆ ಶಾರದಾ ಮಾತೆ, ನವದುರ್ಗೆಯವರು, ಆದಿಶಕ್ತಿ ಮತ್ತು ಮಹಾಗಣಪತಿ ಮೂರ್ತಿಗಳನ್ನು ಶ್ರೀ ಕ್ಷೇತ್ರದ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ನಿರ್ಮಿಸಲಾದ ಆಕರ್ಷಣೀಯ ಸ್ವರ್ಣಮಯ ಕಲಾಮಂಟಪಗಳಲ್ಲಿ ಏಕಕಾಲದಲ್ಲಿ ಪ್ರತಿಷ್ಠೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com