ಬಡಾಕೆರೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ

 ಮರವಂತೆ:  ನಾವುಂದಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ ಮರವಂತೆ ಬಡಾಕೆರೆ ವ್ಯಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆಯಿತು. 
     ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಸಂಘವು ಕಳೆದ ಸಾಲಿನಲ್ಲಿ ರೂ. 18,51,118 ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 10 ಲಾಭಾಂಶ ನೀಡಲು ಸಭೆಯ ಅನುಮೋದನೆ ಕೋರಿದರು. ಸದಸ್ಯರಾದ ಬಿ. ಎ. ಸಯ್ಯದ್, ವಾಸು ಪೂಜಾರಿ, ಅಶೋಕಕುಮಾರ ಶೆಟ್ಟಿ ಲಾಭಾಂಶ ಹೆಚ್ಚಿಸಲು ಸೂಚಿಸಿದರಾದರೂ, ಹೇರೂರು ಶಾಖೆಗೆ ಕಟ್ಟಡ ನಿರ್ಮಿಸುತ್ತಿರುವುದರಿಂದ ಮುಂದಿನ ವರ್ಷ ಆ ಕುರಿತು ಪರಿಶೀಲಿಸಬಹುದು ಎಂದು ಉತ್ತರಿಸಿದರು. ಅದರಂತೆ ಸಭೆ ಶೇ. 10 ಲಾಭಾಂಶ ಘೋಷಿಸಲು ಅನುಮೋದನೆ ನೀಡಿತು. ಸತೀಶ ಮಧ್ಯಸ್ಥ ಪಡಿತರ ವಿತರಣೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕೆಂಬ ಬೇಡಿಕೆ ಮುಂದಿಟ್ಟರು. ಅದಕ್ಕೆ ಅಧ್ಯಕ್ಷರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.  
      ಸ್ವಾಗತಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಅಣ್ಣಪ್ಪ ಬಿಲ್ಲವ  ವರದಿ, ಲೆಕ್ಕಪತ್ರ ಮಂಡಿಸಿದರು. ಸಂಘವು ರೂ. 10. 08 ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ. 11. 92 ಕೋಟಿ ಸಾಲ ನೀಡಿದೆ. ಸಾಲ ವಸೂಲಿ ಪ್ರಮಾಣ ಶೇ. 99 ಎಂದು ತಿಳಿಸಿದರು. ನಿರ್ದೇಶಕರಾದ ಎನ್. ನರಸಿಂಹ ದೇವಾಡಿಗ, ಎಂ. ವಿನಾಯಕ ರಾವ್, ಭೋಜ ನಾಯ್ಕ್, ಮಂಜು ಪೂಜಾರಿ, ಎಚ್. ಮಹಮದ್ ಕುಂಞÂ, ಎಂ. ಚಂದ್ರಶೀಲ ಶೆಟ್ಟಿ, ಲೀಲಾ ಡಿ. ಕುಂದರ್ ವೇದಿಕೆಯಲ್ಲಿದ್ದರು. ಹೇರೂರು ಶಾಖಾ ವ್ಯವಸ್ಥಾಪಕ ಶೇಖರ ಮೊಗವೀರ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com