ವ್ಯ.ಸೇ.ಸ.ಬ್ಯಾಂಕು: ಬಿ.ಜೆ.ಪಿ ಬೆಂಬಲಿಗರ ಗೆಲುವು

ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಮಂಡಳಿಗಾಗಿ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿಯು ಭರ್ಜರಿ ಗೆಲುವುವನ್ನು ದಾಖಲಿಸಿದೆ. ಒಟ್ಟು 10ಸ್ಥಾನಗಳ ಪೈಕಿ ಬಿ.ಜೆ.ಪಿಯು 7 ಸ್ಥಾನವನ್ನು ಗಳಿಸಿ ಸತತ ಎರಡನೇ ಬಾರಿಗೆ ಆಡಳಿತದ ಚುಕ್ಕಾಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
     ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳಾದ ದಿನಕರ ಕೊತ್ವಾಲ್‌, ಅಣ್ಣಯ್ಯ ಪೂಜಾರಿ, ಕೃಷ್ಣಮೂರ್ತಿ, ಶೇಖರ್‌, ಸುಭಾಶ್‌ ಖಾರ್ವಿ, ಮಧುಕರ, ಶ್ರೀಕಾಂತ್‌, ಕಾಂಗ್ರೇಸ್‌ ಬೆಂಬಲಿಗರೆನ್ನಲಾದ ಪ್ರೇಮಾ, ರಮೇಶ್‌ ಹಾಗೂ ಪ್ರೇಮಾ ರಾವ್‌ ಜಯಗಳಿಸಿದರು.
    ತೀವ್ರ ಪೈಪೋಟಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿ.ಜೆ.ಪಿಯ ನೇರ ಹಣಾಹಣಿ ನಡೆದಿದ್ದು, ಕಾಂಗ್ರೆಸ್‌ ಬೆಂಬಲಿತರು ಕೇವಲ 3 ಸ್ಥಾನಕ್ಕೆ ತƒಪ್ತಿಪಟ್ಟುಕೊಳ್ಳುವಂತಾಯಿತು. 

       ಕುಂದಾಪುರದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಿ.ಜೆ.ಪಿಯ ಬೆಂಬಲಿತ ಅಭ್ಯರ್ಥಿಗಳಿಗೆ ಮತವನ್ನು ಚಲಾಯಿಸಿ ಬ್ಯಾಂಕ್‌ನ ಆಡಳಿತವನ್ನು ನಡೆಸಲು ಅವಕಾಶ ಮಾಡಿಕೊಟ್ಟ ಬ್ಯಾಂಕ್‌ನ ಎಲ್ಲಾ ಸದಸ್ಯರುಗಳಿಗೆ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್‌ ಕಾವೇರಿ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ಕೆ. ಮೋಹನ್‌ದಾಸ್‌ ಶೆಣೆ„ ಜಂಟಿಯಾಗಿ ಕೃತಜ್ಞತೆ ಸಲ್ಲಿಸಿರುತ್ತಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com