ಬಾಕಿಮಾರು ಗದ್ದೆಯ ಬದುವಲ್ಲಿ ಸಂಭ್ರಮಿಸಿದ ಹಿರಿಯ- ಕಿರಿಯರು
ಮೂಡುಬಿದಿರೆ: ವಿಶ್ವ ನುಡಿಸಿರಿಗೆ ಮುನ್ನುಡಿಯಾಗಿ ಅದರ ಮೂಲ ಆಶಯವಾದ ಕೃಷಿ ಮತ್ತು ಜನಪದ ಹಿನ್ನಲೆಯಲ್ಲಿ ಶುಕ್ರವಾರ ವಿಶಿಷ್ಟ ರೀತಿಯಲ್ಲಿ ಮುನ್ನುಡಿ ಬರೆಯಲಾಯಿತು.
ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯ ಬಾಕಿಮಾರು ಗದ್ದೆಯಲ್ಲಿ ಕೋಣಗಳೊಂದಿಗೆ ಉಳುಮೆ, ಪಾಡ್ದನಗಳು, ಪೂಕರೆ ನಿಲ್ಲಿಸುವುದು, ನಾಟಿ ಮತ್ತು ವೈವಿದ್ಯಮಯ ಕೆಸರುಗದ್ದೆ ಸ್ಪರ್ಧೆಗಳೊಂದಿಗೆ ನಡೆಯಿತು.
ಕೃಷಿ ಸಂಸ್ಕೃತಿಯನ್ನು ಜನತೆಗೆ ಸಾರುವ ಮೂಲಕ ಜನತೆಗೆ ಸಾಂಸ್ಕೃತಿಕ ಬದುಕನ್ನು ಯುವ ಜನಾಂಗಕ್ಕೆ ಪರಿಚಯಿಸುವ ಮೂಲಕ ವಿಶ್ವ ನುಡಿಸಿರಿಗೆ ನಾಂದಿ ಹಾಡಿದ್ದೇವೆ ಎಂದು ಮೂಡುಬಿದಿರೆಯ ಜೈನ ಮಠದ ಸ್ವಾಮಿಜಿ ಅವರು ಈ ಸಂದರ್ಭದಲ್ಲಿ ಅಭಿಪ್ರಾಯಟಪಟ್ಟರು.
ಈ ವಿಶಿಷ್ಠವಾದ ವಿಶ್ವ ನುಡಿಸಿರಿ ವಿರಾಸತ್ನಲ್ಲಿ ನಾವು ತನು ಮನ ಧನಗಳೊಂದಿಗೆ ಕೈ ಜೋಡಿಸೋಣ. ಬಾಕಿಮಾರು ಗದ್ದೆಯ ಬೆಳಕು ಆಳ್ವಾಸ್ ವಿಶ್ವ ನುಡಿಸಿರಿ- ವಿರಾಸತ್ ವೇದಿಕೆಗೂ ಬೀಳಲಿ ಆ ಮೂಲಕ ಕೃಷಿ ಸಂಸ್ಕೃತಿಯ ಮೂಲಕ ಅದನ್ನು ಮುನ್ನಡೆಸುವ ಅವರ ಕನಸು ನನಸಾಗಲಿ ಎಂದು ಮುಖ್ಯ ಉಪನ್ಯಾಸ ನೀಡಿದ ನರೇಂದ್ರ ರೈ ದೇರ್ಲ ಹಾರೈಸಿದರು. ಭತ್ತದ ಕೃಷಿ ನಶಿಸುತ್ತಿರುವ ಈ ಸಂದರ್ಭದಲ್ಲಿ ಆಳ್ವರ ಈ ಉಪಕ್ರಮ ಖಂಡಿತವಾಗಿಯೂ ಹೊಸ ಒಂದು ಆಶಯವನ್ನು ಮೂಡಿಸುವಂತಿದೆ ಎಂದರು.
ವಿಶ್ವ ನುಡಿಸಿರಿಗೆ ನಾವೆಲ್ಲಾ ಕೈ ಜೋಡಿಸೋಣ ಎಂದು ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ವೇದಿಕೆಯಲ್ಲಿ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಪದ್ಮ ಪ್ರಸಾದ್ ಅಜಿಲ, ಧನಕೀರ್ತಿ ಬಲಿಪ, ಶ್ರೀನಿವಾಸ ಆಳ್ವ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿನ ಇಡೀ ನಡೆದ ಕೃಷಿಯ ಹಿನ್ನಲೆಯ ಕಾರ್ಯಕ್ರಮ ಕೃಷಿಯೇತರ ಮತ್ತು ಕೃಷಿಯಿಂದ ದೂರವಿರುವ ಮಕ್ಕಳಿಗೆ ಅದ್ಬುತ ಅನುಭವ ನೀಡಿತು.
ಬೆಳಗ್ಗೆ ೧೦ ಗಂಟೆಯಿಂದ್ ಸಂಜೆವರೆಗೆ ಸಾವಿರಾರು ವಿದ್ಯಾರ್ಥಿಗಳ ಹರ್ಷೊದ್ಗಾರಗಳೊಂದಿಗೆ ವಿಶಿಷ್ಟವಾಗಿ ನಡೆಯಿತು.ತುಳುನಾಡಿನ ವಿಶಿಷ್ಟ ಶೈಲಿಯ ಊಟೋಪಾಚಾರ, ಚಟ್ಟಂಬಂಡೆ ಚಾ ಇಲ್ಲಿತ್ತು.
photos by: KEETHY ,Suma Studio Moodbidre,
ಆಳ್ವಾಸ್ ಕೃಷಿ ಸಿರಿಯ ವಿಶೇಷಗಳು
* ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಆಳ್ವಾಸ್ ಬಾಕಿಮಾರು ಗದ್ದೆ ನಾಟಿ.
* ಸಾಲು ನಟ್ಟಿಯ ಮೂಲಕ ೩೦-೩೨ ಮಂದಿ ಮಹಿಳೆಯರು ವಿಶೇಷ ಸಂಭ್ರಮಗಳೊಂದಿಗೆ ನಾಟಿಯ ಸವಿ ಉಂಡರು.
* ನಾಟಿಯಿಂದ ಹಿಡಿದು ಪ್ರತಿಯೊಂದು ದೃಶ್ಯಗಳು ನಮ್ಮ ಕುಡ್ಲ ಚಾನಲ್ನಲ್ಲಿ ಪ್ರಸಾರವಾಯಿತು.
* ಮೂರು ಮೂರು ತಂಡದ ದೋಲು, ಕೊಂಬು, ವಾದ್ಯ ಸಹಿತ ಮೆರವಣಿಗೆಯಲ್ಲಿ ಪೂಕರೆಯನ್ನು ನುಡಿಸಿರಿ ವೇದಿಕೆಯಿಂದ ತಂದು ಗದ್ದೆಯಲ್ಲಿ ಸ್ಥಾಪಿಸಲಾಯಿತು.
* ಆಳ್ವಾಸ್ ಗುರಿಕಾರ ಮೋಹನ ಆಳ್ವ ಅವರು ಸ್ದತಹ ಗದ್ದೆ ಉಳುಮೆ ನಡೆಸಿ ಗಮನ ಸೆಳೆದರು.
0 comments:
Post a Comment