ದೇಶದಲ್ಲಿ ಸೈಬರ್‌ ದಾಳಿ ನಿಯಂತ್ರಿಸಲು ಸೂಕ್ತ ಭದ್ರತೆ ಇಲ್ಲ

ರಾಪ್ಷ್ರೀಯ ಸುದ್ದಿ: ಒಂದು ಕಡೆ ಅಮೆರಿಕ ನಮ್ಮ ಇಂಟರ್‌ ನೆಟ್‌ದ ಮೇಲೆ ಕಣ್ಣು ಇಟ್ಟಿದೆ ಇನ್ನೊಂದು ಕಡೆ ಪಾಪಿ ಪಾಕಿಸ್ತಾನದ ಉಗ್ರರು ನಮ್ಮ ಗೌಪ್ಯ ಮಾಹಿತಿಯನ್ನು ಕದಿಯಲು ಹೊಂಚು ಹಾಕುತ್ತಿದ್ದಾರೆ ಆದರೆ ಇದನ್ನೆಲ್ಲ ತಡೆಯಲು ನಮ್ಮ ದೇಶದಲ್ಲಿ ಸೂಕ್ತ ಭದ್ರತೆಯೇ ಇಲ್ಲವಾಗಿದೆ.

 ಸೈಬರ್ ಮೂಲಕ ಉಗ್ರರ ದಾಳಿ ಅಧಿಕವಾಗುತ್ತಿರುವ ಸಮಯದಲ್ಲಿ ದೇಶದಲ್ಲಿ ಸೈಬರ್ ಭದ್ರತೆ ತಜ್ಞರ ಕೊರತೆ ಎದ್ದು ಕಾಣುತ್ತಿದೆ. ಈ ವಿಷಯದ ಇಂಟರ್‌ ನೆಟ್‌ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.

 ಜಾಗತಿಕ ಇಂಟರ್‌ ನೆಟ್‌ ಬಳಕೆಯಲ್ಲಿ ಮೂರನೇ ಸ್ಥಾನದಲ್ಲಿರುವ ನಮ್ಮ ದೇಶದಲ್ಲಿ ಸುಮಾರು 20 ಕೋಟಿ ಅಧಿಕ ಇಂಟರ್‌ ನೆಟ್ ಬಳಕೆದಾರರಿದ್ದಾರೆ. ಇಷ್ಟು ದೊಡ್ಡ ಬಳಕೆದಾರರಿದ್ದರೂ ನಮ್ಮ ಸರ್ಕಾರದ ಸೈಬರ್‌ ಭದ್ರತಾ ತಜ್ಞರ ಸಂಖ್ಯೆ ಬರೇ 556. ಈ ಮಾಹಿತಿಯನ್ನು ಸ್ವತಃ ಮಾನವ ಸಂಪನ್ಮೂಲ ಮತ್ತು ದೂರಸಂಪರ್ಕ ಸಚಿವಾಲಯವೇ ತಿಳಿಸಿದ್ದು, ಜನ ಸಾಮಾನ್ಯರನ್ನು ಚಿಂತೆಗೀಡು ಮಾಡಿದೆ.

   ಇಂಟರ್‌ ನೆಟ್‌ ಬಳಕೆಯಲ್ಲಿ ಅಗ್ರಸ್ಥಾನದಲ್ಲಿರುವ ಅಮೆರಿಕ ಹಾಗೂ ನೆರೆಯ ಚೀನಾ ದೇಶದಲ್ಲಿರುವ ಸೈಬರ್ ಭದ್ರತೆ ತಜ್ಞರ ಸಂಖ್ಯೆಗೆ ನಮ್ಮ ದೇಶದ ತಜ್ಞನರ ಸಂಖ್ಯೆಯನ್ನು ಹೋಲಿಸಿದರೆ ಆನೆಗೂ ಇರುವೆಗೂ ಇರುವ ವ್ಯತ್ಯಾಸದಂತಿದೆ. 56 ಕೋಟಿ ಇಂಟರ್‌ ನೆಟ್‌ ಬಳಕೆದಾರರಿರುವ ಚೀನಾದಲ್ಲಿ 1.25 ಲಕ್ಷ ಭದ್ರತಾ ತಜ್ಞರಿದ್ದಾರೆ. ಅಮೆರಿಕದಲ್ಲಿ 25 ಕೋಟಿ ನೆಟ್ ಬಳಕೆದಾರರಿದ್ದು, 91,080 ಭದ್ರತಾ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ.

   ಇತ್ತೀಚಿನ ದಿನಗಳಲ್ಲಿ ಸೈಬರ್‌ ದಾಳಿ ಹೆಚ್ಚಾಗುತ್ತಿರುವುದರಿಂದ ದೇಶಕ್ಕೆ ಸುಮಾರು 5 ಲಕ್ಷ ಸೈಬರ್ ತಜ್ಞರ ಅಗತ್ಯವಿದೆ. ಆದರೆ ನಮ್ಮ ಘನ ಸರಕಾರ ಕೇವಲ  5,000 ಭದ್ರತೆ ತಜ್ಞರ ನೇಮಕಾತಿಗೆ ಚಿಂತನೆ ನಡೆಸಿದೆ. ರಕ್ಷಿಸ ಬೇಕಾದ ಸರಕಾರವೇ ಇಂತಹ ನಿರ್ಣಯ ಕೈಗೊಂಡರೆ ಮುಂದಿನ ದಿನದಲ್ಲಿ ಸೈಬರ್‌ ದಾಳಿಕಾರಿಗೆ ಯಾವುದೇ ತಡೆ ಇಲ್ಲದಂತಾಗುತ್ತದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com