ಹದಗೆಟ್ಟ ಕೋಟೇಶ್ವರ ಕಿನರಾ ಕ್ರಾಸ್‌ ಮೀನುಗಾರಿಕೆ ರಸ್ತೆ

ಕುಂದಾಪುರ: ಕೋಟೇಶ್ವರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಿನರಾ ಕ್ರಾಸ್‌ನಿಂದ ಸಮುದ್ರ ತೀರದ ತನಕ ರಸ್ತೆ ಅಭಿವದ್ಧಿ ಕಾಮಗಾರಿ ವರ್ಷದಲ್ಲೇ ತನ್ನ ಬಣ್ಣ ಕಳಚಿಕೊಂಡಿದೆ. 1 ಕೋಟಿ ರೂ. ಅನುದಾನದ ರಸ್ತೆ ಅಭಿವದ್ಧಿ ಕಾಮಗಾರಿ ನಡೆದು 2 ವರ್ಷ ಸಂದಿದ್ದು, ರಸ್ತೆ ಸಂಪೂರ್ಣ ಬಾಯ್ತೆರೆದಿದೆ. ಮಂದಗತಿಯಲ್ಲಿ ಕಾಮಗಾರಿ ನಡೆದಿರುವ ಜತೆಗೆ ಇದೀಗ ಜಲ್ಲಿಕಲ್ಲುಗಳು ಮೇಲೆದ್ದಿರುವುದು, ಡಾಮರು ನಾಪತ್ತೆಯಾಗಿರುವುದು ಮತ್ತು ಅಲ್ಲಲ್ಲಿ ಕೆಸರುಮಯ ಆಗಿರುವ ರಸ್ತೆಯ ನೋಟ ಸಂಶಯಕ್ಕೆಡೆಮಾಡಿಕೊಟ್ಟಿದೆ. ವಾಹನಗಳು, ನಾಗರಿಕರು ಸಂಚರಿಸಲಾಗದಷ್ಟು ರಸ್ತೆ ಹದಗೆಟ್ಟಿರುವುದರಿಂದ ನಾಗರಿಕರ ಆಕ್ರೋಶ ಮುಗಿಲು ಮುಟ್ಟಿದೆ. 


ಸ್ಪಂದನವಿಲ್ಲ: ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವದ್ಧಿ ನಡೆದಿದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕೋಟೇಶ್ವರ ಕಿನರಾ ಕ್ರಾಸ್ ಸನಿಹದ ಗೋಯಾಡಿಬೆಟ್ಟು ಕ್ರಾಸ್-ಅರಾಲ್‌ಗುಡ್ಡೆ ಕ್ರಾಸ್‌ವರೆಗೆ ಸಂಚರಿಸಲಾಗದಷ್ಟು ರಸ್ತೆ ಹದಗೆಟ್ಟಿದೆ. ಕಲ್ಲಿನರಾಶಿ, ಕೆಸರು ಜೀವ ಹಿಂಡುತ್ತಿದೆ. ಪಂಚಾಯಿತಿಗೆ, ಸಂಬಂಧಿತರಿಗೆ ಹೊಸ ರಸ್ತೆಯ ದುರವಸ್ಥೆಯ ಬಗ್ಗೆ ಮನವಿ ಸಲ್ಲಿಸಲಾಗಿದ್ದರು ಪ್ರಯೋಜನವಾಗಿಲ್ಲ. ಅರೆಬರೆ ಕಾಮಗಾರಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾಡಳಿತ ತಕ್ಷಣ ಗಮನಹರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಹಳೆಅಳಿವೆ ನಿವಾಸಿ ಗಜಾನನ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com