ಕೃಷಿಭೂಮಿ ಮಾರಾಟ ನಿಷೇಧ ವಿಧೇಯಕ ಜಾರಿಯಾಗಲಿ: ಎನ್.ರಾಘವೇಂದ್ರರಾವ್

ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಷಿಭೂಮಿ ಇಳಿಮುಖ ಆಗುತ್ತಿದೆ. ಹಣದ ಆಸೆಗೆ ಬಲಿಬಿದ್ದು ಕಷಿಭೂಮಿಯನ್ನು ಮಾರಾಟ ಮಾಡುವ ಪ್ರಕ್ರಿಯೆ ಹೆಚ್ಚುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದ್ದಲ್ಲಿ ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಬಹುದು. ನಾವು ಉಣ್ಣುವ ಅನ್ನಕ್ಕಾಗಿ ನಾವೆ ಒದ್ದಾಡುವ ಪರಿಸ್ಥಿತಿ ಬರುವ ಮೊದಲು ಕಷಿಭೂಮಿ ಉಳಿಸಿ ಬೆಳೆಸುವ ಜಾಗತಿ ಮೂಡಬೇಕು. ಸರಕಾರ ಕಷಿಭೂಮಿ ಮಾರಾಟ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಕೋಟೇಶ್ವರ ಚೇತನಾ ಕಲಾ ಮತ್ತು ಕ್ರೀಡಾರಂಗದ ಅಧ್ಯಕ್ಷ ಎನ್. ರಾಘವೇಂದ್ರ ರಾವ್ ಒತ್ತಾಯಿಸಿದರು. 

   ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ, ಕಷಿ ಇಲಾಖೆ ಕುಂದಾಪುರ, ಚೇತನಾ ಕಲಾ ಮತ್ತು ಕ್ರೀಡಾರಂಗ, ರೋಟರಿ ಕ್ಲಬ್ ಮತ್ತು ಆ್ಯನ್ಸ್ ಕ್ಲಬ್ ಕೋಟೇಶ್ವರ ಸಂಯುಕ್ತ ಆಶ್ರಯದಲ್ಲಿ ಸುರಕ್ಷಿತ ಕೀಟನಾಶಕಗಳ ಬಳಕೆ ಹಾಗೂ ಸಮಗ್ರ ಪೀಡೆ ನಿರ್ವಹಣೆಯ ಕುರಿತು ಹಮ್ಮಿಕೊಂಡ ಕಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

70ರ ದಶಕದಲ್ಲಿ ಸಂಪೂರ್ಣ ಸಾವಯವ ಕಷಿ ಇತ್ತು. ಬದಲಾದ ಪರಿಸ್ಥಿತಿ ರಾಸಾಯಿನಿಕ ಬಳಕೆ ಹೆಚ್ಚುತ್ತಿದೆ. ಅಂದು ರೋಗಗಳಿದ್ದವು, ಈಗಲೂ ಇವೆ. ತಡೆಗಟ್ಟುವಿಕೆ ಮಾತ್ರ ಆಗುತ್ತಿಲ್ಲ. ಆಧುನಿಕ ಕಷಿ ಪದ್ಧತಿಯ ಅಳವಡಿಕೆಯೂ ಕೂಡ ಕ್ರಮಬದ್ಧವಾಗಿರಬೇಕು ಎಂದು ಪ್ರತಿಪಾದಿಸಿದ ಅವರು ರೆತರು ಆಧುನಿಕ ಜ್ಞಾನ ಪಡೆಯುವುದ ಜತೆಯಲ್ಲಿ ಪಾರಂಪರಿಕ ಕಷಿಗೂ ಹೆಚ್ಚಿನ ಒತ್ತು ನೀಡಬೇಕು ಎಂದರು. 

ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಅಧ್ಯಕ್ಷ ಬಿ.ವಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೇಯಾನ್, ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಕುಂಭಾಸಿ, ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಭಾಕಿಸಂ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಐತಾಳ್ ಉಪಸ್ಥಿತರಿದ್ದರು. 

ಸಂಪನ್ಮೂಲ ವ್ಯಕ್ತಿಗಳಾದ ಬ್ರಹ್ಮಾವರ ಕಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ.ಜಯಲಕ್ಷ್ಮೀ ಎನ್.ಹೆಗಡೆ, ಕುಂದಾಪುರ ಸಹಾಯಕ ಕಷಿ ನಿರ್ದೇಶಕ ಎ.ರಾಮದಾಸ ರೆ, ತೋಟಗಾರಿಕೆ ಇಲಾಖೆಯ ನಿವತ್ತ ಅಕಾರಿ ವಿ.ಕುಚೇಲಯ್ಯ ಸುರಕ್ಷಿತ ಕೀಟನಾಶಕಗಳ ಬಳಕೆ, ಸಮಗ್ರ ಪೀಡೆ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ಕಷಿಕರೊಂದಿಗೆ ಸಂವಾದ ನಡೆಯಿತು. ಕಾರ್ಯಕ್ರಮ ಸಂಘಟಕ ಶೇಷಗಿರಿ ಗೋಟ ಸ್ವಾಗತಿಸಿದರು. ಎಂಜಿನಿಯರ್ ಬಿ.ಎಂ.ಗುರುರಾಜ ರಾವ್ ಕಾರ್ಯಕ್ರಮ ನಿರ್ವಹಿಸಿದರು. ತೋಟಗಾರಿಕೆ ಇಲಾಖಾಧಿಕಾರಿ ರಮೇಶ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com